ದಿ.ದಾಮೋದರ ಗೌಡ ಚಿಲ್ಪಾರ್ ರವರಿಗೆ ಶ್ರದ್ಧಾಂಜಲಿ ,ವೈಕುಂಠ ಸಮಾರಾಧನೆ

0

ಅಮರಮುಡ್ನೂರು ಗ್ರಾಮದ ಚಿಲ್ಪಾರ್ ದಾಮೋದರ ಗೌಡರು ಮಾ. 19 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಎ.7 ರಂದು ಚಿಲ್ಪಾರ್ ಮನೆಯಲ್ಲಿ ನಡೆಯಿತು.
ನ್ಯಾಯವಾದಿ ನವೀನ್ ಚಿಲ್ಪಾರ್
ಸ್ವಾಗತಿಸಿ, ಸಹೋದರ ನಿವೃತ್ತ ಪ್ರಾಂಶುಪಾಲ ಬಾಲಚಂದ್ರ ಗೌಡ ಚಿಲ್ಪಾರ್ ಮತ್ತು ಬಿ .ಎಸ್ ಎನ್. ಎಲ್. ನಿವೃತ್ತ ಅಧಿಕಾರಿ ಸೂರಪ್ಪ ಬೊಳ್ಳೂರುರವರು ದಿ.ದಾಮೋದರ ಗೌಡರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.


ಆಗಮಿಸಿದ ನೂರಾರು ಜನರು ದಿ.ದಾಮೋದರ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಲಲಿತಾ, ಪುತ್ರ ಜಯದೀಪ್ ಚಿಲ್ಪಾರ್, ಸೊಸೆ ಶ್ರೀಮತಿ ಲತಾ ಜಯದೀಪ್,ಪುತ್ರಿಯರಾದ ಶ್ರೀಮತಿ ವಾರಿಜಾಕ್ಷಿ ಪದ್ಮನಾಭ ಗೌಡ ದೇವಸ್ಯ, ಶ್ರೀಮತಿ ಶಾರದಾ ಜನಾರ್ಧನ ಗೌಡ ಕನ್ನಡ್ಕ,ಬೊಳ್ಳೂರು, ಶ್ರೀಮತಿ ವಿಶಾಲಾಕ್ಷಿ ಗಂಗಾಧರ ಮಲ್ಲಾರ ,ಶ್ರೀಮತಿ ಪ್ರೇಮಲತಾ ಸುಂದರ ಕೋಡಿಂಬಾಳ ,ಅಳಿಯಂದಿರು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.