ಗೌರಮ್ಮ ಮತಾವು ಶ್ರದ್ಧಾಂಜಲಿ ಸಭೆ

0

ಸುಳ್ಯ ಜಟ್ಟಿಪಳ್ಳದ ಕಾನತ್ತಿಲ ನಿವಾಸಿ ಎಂ.ಆರ್.ಹರಿಶ್ಚಂದ್ರರವರ ತಾಯಿ ಗೌರಮ್ಮ ಮತಾವುರವರ ಶ್ರದ್ಧಾಂಜಲಿ ಕಾರ್ಯಕ್ರಮ ಎ.9 ರಂದು ಕಾನತ್ತಿಲದ ಮತಾವು ಮನೆಯಲ್ಲಿ ನಡೆಯಿತು. ಗೌಡರ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿಯವರು ಮೃತರ ಕುರಿತು ಮಾತನಾಡಿ ಶ್ರದ್ಧಾಂಜಲಿ ನುಡಿಯನ್ನಾಡಿದರು. ಆಗಮಿಸಿದ್ದ ನೂರಾರು ಮಂದಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಮರ್ಪಿಸಿದರು.


ಮೃತರ ಪುತ್ರ ಎಂ.ಆರ್.ಹರಿಶ್ಚಂದ್ರ, ಪುತ್ರಿಯರಾದ ಭವಾನಿ ಸುಂದರ ಗೌಡ ಮೂರ್ಜೆ, ಲೀಲಾವತಿ ಕಾಂತಪ್ಪ ಗೌಡ ಕೊಳ್ಚಪ್ಪು, ಚಂದ್ರಾವತಿ ನಾರಾಯಣ ಗೌಡ ಹೊಸೊಳಿಕೆ, ಲೋಕೇಶ್ವರಿ ತಿಮ್ಮಪ್ಪ ಗೌಡ ಪಲ್ಲತಡ್ಕ, ಸರೋಜ ಕುಶಾಲಪ್ಪ ಗೌಡ ನಿಡುಬೆ, ಜಯಂತಿ ಮೋನಪ್ಪ ಗೌಡ ನಾರಾಲು ಹಾಗೂ ಮನೆಯವರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.