ಚುನಾವಣಾ ಫಲಿತಾಂಶದ ಕುತೂಹಲವನ್ನು ಮೀರಿಸಿದ ಟಿಕೆಟ್ ಕುತೂಹಲ

0

ಕ್ಷಣ ಕ್ಷಣಕ್ಕೂ ಜನರಿಂದ ವಿಮರ್ಷೆ : ಕಾಂಗ್ರೆಸ್, ಬಿಜೆಪಿಯಲ್ಲೂ ಚರ್ಚೆ


ಸುಳ್ಯ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳದ್ದೇ ಕುತೂಹಲಪ್ರತಿ ಬಾರಿ ಚುನಾವಣೆ ನಡೆದು ಫಲಿತಾಂಶದ ದಿನ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲದ ಸಂಗತಿಯಾದರೆ ಈ ಬಾರಿ ಈ ಹಿಂದೆಂದಿಗಿಂತಲೂ ಅಧಿಕ ಕುತೂಹಲವಿರುವುದು ಸುಳ್ಯ ಪುತ್ತೂರು ಕ್ಷೇತ್ರಗಳ ಚುನಾವಣಾ ಟಿಕೆಟ್ ಯಾರಿಗೆ ಲಭಿಸಲಿದೆ ಎಂಬ ಕಾರಣಕ್ಕೆ.
ಈ ಎರಡೂ ಕ್ಷೇತ್ರಗಳ ಎಲ್ಲೆಡೆ ಪ್ರತಿ ಕ್ಷಣ ಟಿವಿ, ವೆಬ್‌ಸೈಟ್‌ಗಳನ್ನು ನೋಡಿ ಜನ ತಮ್ಮದೇ ರೀತಿಯಲ್ಲಿ ವಿಮರ್ಷೆಗೆ ತೊಡಗುತ್ತಿರುವುದು ಕಂಡು ಬರುತ್ತಿದೆ. ಸುಳ್ಯದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎನ್ನುವುದು ಘೋಷಣೆಯಾಗದ ಕಾರಣ ಈ ಚರ್ಚೆ ಮತ್ತಷ್ಟು ಹೆಚ್ಚಿದೆ. ಯಾವುದೇ ಕ್ಷಣದಲ್ಲಿ ಬಿಜೆಪಿ ಟಿಕೆಟ್ ಪಟ್ಟಿ ಘೋಷಿಸುವ ಹಿನ್ನಲೆಯಲ್ಲಿ ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಹಾಲಿ ಶಾಸಕ ಅಂಗಾರರಿಗೆ ಮತ್ತೆ ಟಿಕೆಟ್ ದೊರೆಯುವುದೇ ಅಥವಾ ಹೊಸ ಅಭ್ಯರ್ಥಿಗೆ ಛಾನ್ಸ್ ನೀಡಲಾಗುವುದೋ ಎಂಬ ಕುತೂಹಲ ಎಲ್ಲರದ್ದು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸ್ಪರ್ಧಾಳುಗಳ ಪಟ್ಟಿ ಬಿಡುಗಡೆಯಾಗಿಲ್ಲ. ಈ ಎರಡೂ ಪಕ್ಷಗಳಿಂದ ಸುಳ್ಯದವರ ಹೆಸರುಗಳೂ ಕೇಳಿಬರುತ್ತಿರುವ ಕಾರಣ ಇಲ್ಲೂ ಆ ಬಗ್ಗೆ ಕುತೂಹಲ ಇದೆ.