ಸುಬ್ರಹ್ಮಣ್ಯ: ಜೆ ಸಿ ಘಟಕ ಅಭಿವೃದ್ದಿ ಹಾಗೂ ಆಡಳಿತದ ಬಗ್ಗೆ ತರಬೇತಿ

0

ಜೆ ಸಿ ಐ ಸುಬ್ರಹ್ಮಣ್ಯ ಕುಕ್ಕೆಶ್ರೀ ವತಿಯಿಂದ ಸ್ಥಳೀಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಇತ್ತೀಚೆಗೆ ಘಟಕ ಅಭಿವೃದ್ಧಿ ಹಾಗೂ ಆಡಳಿತದ ತರಬೇತಿ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ವಲಯ ಉಪಾಧ್ಯಕ್ಷರಾದ ದೇವಿ ಪ್ರಸಾದ್ ಕುದ್ಪಾಜೆ ಅವರು ನಡೆಸಿಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಮಣ್ಯ ಕುಕ್ಕೆ ಶ್ರೀ ಜೆಸಿಐನ ಅಧ್ಯಕ್ಷ ಯೋಗನಾಥ್ ವಹಿಸಿದ್ದರು.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆ ಸಿ ಐ ಸಂಸ್ಥೆಯ ಉಪಾಧ್ಯಕ್ಷರಾದ ಲೋಕೇಶ್ ಪೀರನಮನೆ, ಪೂರ್ವ ರಾಷ್ಟ್ರೀಯ ನಿರ್ದೇಶಕರುಗಳಾದ ಜೇಸಿ ಚಂದ್ರಶೇಖರ್ ನಾಯರ್, ಡಾ| ರವಿ ಕಕ್ಕೆಪದವು, ಜೆಸಿ ಸುಬ್ರಹ್ಮಣ್ಯ ಅತ್ಯಾಡಿ, ಜೆಸಿ ವೆಂಕಟೇಶ್ ಕೆಆರ್, ಪೂರ್ವ ಅಧ್ಯಕ್ಷ ಮಣಿಕಂಠ, ಧನಂಜಯ, ಚಂದ್ರಕಲಾ, ಮುಂತಾದವರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜಿಸಿಐನ ಕಾರ್ಯದರ್ಶಿ ಡಾ| ರಾಜೇಶ್ವರಿ ವಂದಿಸಿದರು