ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಬಣ್ಣ ಬೇಸಿಗೆ ಶಿಬಿರಕ್ಕೆ ಚಾಲನೆ

0

ಮಕ್ಕಳ ಕನಸಿನ ಹಬ್ಬ ಬಣ್ಣ -ಸುಳ್ಯ ರಂಗಮಯೂರಿ ಕಲಾ ಶಾಲೆಯ ಆಯೋಜನೆ

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಕಳೆದ ಹಲವಾರು ವರುಷಗಳಿಂದ ವಿವಿಧ ಕಲಾ ಪ್ರಕಾರಗಳ ತರಬೇತಿ ಕೇಂದ್ರವಾಗಿರುವ ರಂಗ ಮಯೂರಿ ಕಲಾ ಶಾಲೆಯ ಆಯೋಜನೆಯಲ್ಲಿ ನಡೆಯುತ್ತಿರುವ ಬಣ್ಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಇಂದು ಸುಳ್ಯದ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.


ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಡಾ. ಉಜ್ವಲ್ ಯು.ಜೆ ಯವರು ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅಭ್ಯಾಗತರಾಗಿ ಸುಳ್ಯ ಕಸ್ತೂರಿ ನರ್ಸರಿ ಮಾಲಕಿ‌ ಶ್ರೀಮತಿ ಲತಾಮಧುಸೂಧನ್, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ‌ ಉಪಸ್ಥಿತರಿದ್ದರು.ಪೋಷಕ ಕಮಿಟಿ ಸದಸ್ಯ ಭವಾನಿ ಶಂಕರ ಅಡ್ತಲೆ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು. ಸಿಂಚನ ಪುತ್ತಿಲ ವಂದಿಸಿದರು. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಕಾರ್ಯಕ್ರಮ ನಿರ್ವಹಿಸಿದರು.


ಈ ಸಂದರ್ಭದಲ್ಲಿ ತರಬೇತುದಾರರು ಮತ್ತು ಶಿಬಿರಾರ್ಥಿಗಳು ಹಾಗೂ ಕಲಾ ಶಾಲೆಯ ಪೋಷಕ ಕಮಿಟಿ ಸದಸ್ಯರು ಭಾಗವಹಿಸಿದರು.