ಕೆರೆಗೆ ಬಿದ್ದ ಆನೆಗಳನ್ನು ಹಿಡಿದು ಸ್ಥಳಾಂತರಿಸಬೇಕು

0

ಕೃಷಿಕ ನವೀನ್ ರೈ ಮೇನಾಲ‌ ಒತ್ತಾಯ

ತುದಿಯಡ್ಕದಲ್ಲಿ ತೋಟಕ್ಕೆ ಬಂದು ಕೆರೆಗೆ ಬಿದ್ದಿರುವ ಕಾಡಾನೆಗಳನ್ನು ಹಿಡಿದು ಅರಣ್ಯ ಇಲಾಖೆಯವರು ಇಲ್ಲಿಂದ ದೂರಕ್ಕೆ ಸಾಗಿಸಬೇಕು ಎಂದು‌ ಕೃಷಿಕ ನವೀನ್ ರೈ ಮೇನಾಲ‌ ಹಾಗೂ ತುದಿಯಡ್ಕ ವ್ಯಾಪ್ತಿಯ ಜನರು ಆಗ್ರಹಿಸಿದ್ದಾರೆ.

ಅಜ್ಜಾವರ, ಮಂಡೆಕೋಲು, ಆಲೆಟ್ಟಿ ಈ ಭಾಗದಲ್ಲಿ ಕಾಡಾನೆಗಳು‌ ನಿರಂತರ ಕೃಷಿ ತೋಟಕ್ಕೆ ಬಂದು ಕೃಷಿ ಹಾನಿಗೆಡಹಿತ್ತಿದೆ. ಈ ಆನೆಯನ್ನು ದೂರಕ್ಕೆ ಸಾಗಿಸುವಂತೆ ನಾವು ಆಗ್ರಹಿಸುತ್ತಿದ್ದು, ಈ ಬಾರೀ ಕೆರೆಗೆ ಬಿದ್ದಿರುವ ಆನೆಯನ್ನು ಅಲ್ಲಿಂದಲೇ ಹಿಡಿದು ಸಾಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.