ಕುಂ..ಕುಂ.. ವಸ್ತ್ರ ಮಳಿಗೆ ವಿರುದ್ಧ ಅಪಪ್ರಚಾರದ ಪೋಸ್ಟರ್ ವೈರಲ್

0

ಅಪಪ್ರಚಾರ ನಡೆಸುವವರನ್ನು ದೈವವೇ‌ ನೋಡಿಕೊಳ್ಳಲಿ :‌ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆಗೆ ನಿರ್ಧಾರ

ಸುಳ್ಯದ ಹೆಸರಾಂತ ವಸ್ತ್ರ ‌ಮಳಿಗೆಯ ಹೆಸರಲ್ಲಿ ಪೋಸ್ಟರ್ ಒಂದು ವೈರಲ್ ಆಗುತ್ತಿದ್ದು ಈ ಪೋಸ್ಟರ್ ಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಜನಪ್ರಿಯತೆ ಸಹಿಸದ ಕೆಲವರು ಈ ರೀತಿ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವವರನ್ನು ದೈವವೇ ನೋಡಿಕೊಳ್ಳುತ್ತದೆ. ನಾವು ಕಲ್ಕುಡ ದೈವಸ್ಥಾನದಲ್ಲಿ ಮುಂದಿನ ಸಂಕ್ರಮದಂದು ಪ್ರಾರ್ಥನೆ ಮಾಡುತ್ತೇವೆ ಎಂದು ಸಂಸ್ಥೆಯ‌ ಪಾಲುದಾರರು ತಿಳಿಸಿದ್ದಾರೆ.

ಸೋಮವಾರವಷ್ಟೆ ಕುಂ..ಕುಂ… ಫ್ಯಾಷನ್ ನವರು 10 ವರ್ಷದ ಸಂಭ್ರಮಾಚರಣೆ ಆಚರಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್ ಆಗುತ್ತಿದ್ದು, ಅದರಲ್ಲಿ ನಾನು ಭಜರಂಗಿ ಅದರಲ್ಲೇನಿದೆ.. ನಮಗೆ‌ ಮುಸ್ಲಿಮರ ವ್ಯಾಪಾರ ಬೇಡ ಇತ್ಯಾದಿ ಉಲ್ಲೇಖವಿದೆ. ಈ ಕುರಿತು ಪ್ರತಿಕ್ರಿಯೆ ‌ನೀಡಿರುವ ಸಂಸ್ಥೆಯ ಮಾಲಕರು ನಾವು ಆ ರೀತಿ ಪೋಸ್ಟ್ ಹಾಕಿಲ್ಲ. ಯಾರೋ ಈ ರೀತಿ ಬರೆದಿದ್ದಾರೆ. ಪ್ರಾಮಾಣಿಕ ವ್ಯವಹಾರಕ್ಕೆ ಈ ರೀತಿ ಅಪಪ್ರಚಾರ ಸರಿಯಲ್ಲ. ನಾವು ಎಲ್ಲರನ್ನೂ ಒಂದೇ ರೀತಿ‌ ನೋಡುವವರು ಎಂದ ಅವರು ಅಪಪ್ರಚಾರ ‌ಮಾಡಿದವರನ್ನು ಕಲ್ಕುಡ ಸ್ವಾಮಿಯೇ ನೋಡಿಕೊಳ್ಳಲಿ ಎಂದು ಹೇಳಿದ್ದಾರೆ.