ಮಡಪ್ಪಾಡಿಯಲ್ಲಿ 2 ದಿನಗಳಿಂದ‌ ಬಿಎಸ್ ಎನ್ ಎಲ್ ರೇಂಜ್ ಇಲ್ಲ…

0

ಮಡಪ್ಪಾಡಿ ಭಾಗದಲ್ಲಿ ಕಳೆದೆರಡು ದಿನಗಳಿಂದ ಬಿಎಸ್ ಎನ್ ಎಲ್ ರೇಂಜ್ ಇಲ್ಲದೇ ಜನ ಸಂಕಷ್ಟ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ದೂರವಾಣಿ ಸಂಪರ್ಕದ ಕಷ್ಟ ಅನುಭವಿಸುತ್ತಿದ್ದರು. ವಿದ್ಯುತ್ ಇದ್ದ ಸಂದರ್ಭ ಬಿಎಸ್ ಎನ್ ಎಲ್ ರೇಂಜ್ ಇರುತ್ತಿತ್ತು. ಆದರೆ ಈಗ ವಿದ್ಯುತ್ ಇದ್ದರೂ ರೇಂಜ್ ಇಲ್ಲದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಾಗಿದೆ‌.

ಇಲ್ಲಿ ಈ ಮೊದಲು ವಿದ್ಯುತ್ ಇದ್ದಾಗ ಬಿ ಎಸ್ ಎನ್ ಎಲ್‌ ರೇಂಜ್ ಇರುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ವಿದ್ಯುತ್ ಇದ್ದರೂ ರೇಂಜ್ ಇಲ್ಲ. ಹೀಗಾಗಿ ಈ ಭಾಗದ ಜನ‌ ರೇಂಜ್ ಇಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ.‌ ಅಲ್ಲದೇ ಪಂಚಾಯತ್ ನಲ್ಲಿಯೂ ಕೆಲಸ‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಡಪ್ಪಾಡಿ ಗ್ರಾ.ಪಂ. ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ತಿಳಿಸಿದ್ದಾರೆ.