ತಮ್ಮಯ್ಯ ಗುರಿಕುಮೇರ್ ಎಡಮಂಗಲ ನಿಧನ

0

ಎಡಮಂಗಲ ಗ್ರಾಮದ ಗುರಿಕುಮೇರ್ ತಮ್ಮಯ್ಯರವರು ಅಲ್ಪಕಾಲದ ಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಏಪ್ರಿಲ್ 13 ರಂದು ನಿಧನರಾದರು.
ರಾತ್ರಿ ಮಲಗಿದ್ದ ಸಮಯದಲ್ಲಿ ಅಸೌಖ್ಯ ಉಂಟಾಗಿ ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸಿದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಕೃಷಿಕರಾಗಿದ್ದ ಇವರು ಪತ್ನಿ ಸುಂದರಿ, ಪುತ್ರರಾದ ಲಕ್ಷ್ಮೀಶ ಪೂದೆ, ಕಿಶೋರ್ ಗುರಿಕುಮೇರ್, ಪುತ್ರಿ ಶಶಿ ಪ್ರಭ ಪಾಲೋಳಿ, ಸಹೋದರರಾದ ಕೃಷ್ಣಪ್ಪ ಗೌಡ ದೋಳ್ತಿಲ, ಧರ್ಮಪಾಲ ಹೇಮಳ, ಬೆಳಿಯಪ್ಪ ಗೌಡ ಕೇಂಜೂರು, ಸಹೋದರಿ ಸೀತಮ್ಮ, ಸೊಸೆಯಂದಿರಾದ ಚಿತ್ರಾವತಿ, ಪ್ರಜ್ಞ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.