ಕೆ.ವಿ.ಜಿ.ಆರ್.ಪಿ. ಸ್ವಿಮ್ಮಿಂಗ್ ಪೂಲ್ ಬೇಸಿಗೆ ಈಜು ಶಿಬಿರ ಸಮಾರೋಪ

0

ಸುಳ್ಯದ ಕೆ.ವಿ.ಜಿ.ಆರ್.ಪಿ. ಸ್ವಿಮ್ಮಿಂಗ್ ಪೂಲ್‍ನಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಬೇಸಿಗೆ ಈಜು ಶಿಬಿರ ಎ. 10ರಂದು ಸಮಾರೋಪಗೊಂಡಿತು. ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್‌ಟ್ರಸ್ಟಿ ಡಾ| ರೇಣುಕಾ ಪ್ರಸಾದ್ ಕೆ.ವಿ. ಯವರ ಆಶಯದಂತೆ, ಈಜುಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಉಜ್ವಲ್ ಯು.ಜೆ. ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸುಳ್ಯದಲ್ಲೇ ದೊರಕುವಂತಾಗಿದೆ ಎಂದು ಅಭಿಪ್ರಾಯ ಪಡುವುದರೊಂದಿಗೆ ಮುಂದಿನ ದಿನಗಳಲ್ಲಿ ಈಜು ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಬಳಿಕ ಶಿಬಿರಾರ್ಥಿಗಳಿಗೆ ಸಾಧನಾಪತ್ರ ವಿತರಿಸಲಾಯಿತು. ತಾಲೂಕಿನ ವಿವಿಧ ಶಾಲೆಗಳ ಒಟ್ಟು 37 ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಈಜುಕೊಳದ ಅಧ್ಯಕ್ಷ ಡಾ| ಕುಸುಮಾಧರ್, ಶ್ರೀಮತಿ ರೇಣುಕಾ ಉತ್ತಪ್ಪ, ಈಜು ತರಬೇತುದಾರ ಭಾಸ್ಕರ್ ಬೆಳಗದ್ದೆ, ಮತ್ತು ಭಾನುಪ್ರಕಾಶ್ ಹಾಜರಿದ್ದರು.