ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ ಪಕ್ಷಕ್ಕೆ ರಾಜೀನಾಮೆ

0

ಕೈ ಬಿಟ್ಟು ತೆನೆ ಹೊರಲಿರುವ ದಿವ್ಯಪ್ರಭಾ ಚಿಲ್ತಡ್ಕ

ಇಂದು ಜೆಡಿಎಸ್ ಸೇರ್ಪಡೆ

ಕಾಂಗ್ರೆಸ್ ನಾಯಕಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ದಿವ್ಯ ಪ್ರಭಾ ಚಿಲ್ತಡ್ಕ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದು ಇಂದು ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ.

ಬೆಂಗಳೂರಿನ ಜೆ ಪಿ ಭವನದಲ್ಲಿ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ಇಂದು ಮದ್ಯಾಹ್ನ ಕಾಂಗ್ರೆಸ್ ನಾಯಕ ರಘು ಆಚಾರ್ ಸೇರಿದಂತೆ ಇತರ ಏಳೆಂಟು ನಾಯಕರೊಂದಿಗೆ ಜೆಡಿಎಸ್ ಪಕ್ಷ ಸೇರಲಿದ್ದಾರೆ. ಇದನ್ನು ಅಧಿಕೃತವಾಗಿ ದಿವ್ಯಪ್ರಭಾ ಚಿಲ್ತಡ್ಕ ಅವರು ಅಧಿಕೃತವಾಗಿ ಧೃಡಪಡಿಸಿದ್ದಾರೆ ಮತ್ತು ಎ.15 ಅಥವಾ 16ರಂದು ಅಭಿಮಾನಿಗಳ ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸುವುದಾಗಿ ಹೇಳಿದ್ದಾರೆ.