ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ, ದ್ಸಿಕ್ರ್, ದುವಾ ಮಜ್ಲೀಸ್ ಹಾಗೂ ಇಫ್ತಾರ್ ಕೂಟ

0

ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ (ರಿ.) ಗೂನಡ್ಕ ಇದರ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಈ ಸಂಸ್ಥೆಯ ಮಾಜಿ ಉಪಾಧ್ಯಕ್ಷರಾದ ಸಿ.ಎಂ.ಅಬ್ದುಲ್ಲ ಗೂನಡ್ಕ ಹಾಗೂ ಸಂಸ್ಥೆಯ ಹಾಲಿ ಉಪಾಧ್ಯಕ್ಷರಾದ ಪೆಲ್ತಡ್ಕ ಮಹಮ್ಮದ್ ಅವರ ತಾಯಿಯ ಹೆಸರಿನಲ್ಲಿ ನಡೆದ ದ್ಸಿಕ್ರ್, ದುವಾ ಮಜ್ಲೀಸ್, ಅನುಸ್ಮರಣಾ ಕಾರ್ಯಕ್ರಮ ಹಾಗೂ ಇಫ್ತಾರ್ ಕೂಟವು ಗೂನಡ್ಕದ ಬದ್ರಿಯಾ ಜುಮಾ ಮಸೀದಿಯಲ್ಲಿ ಜರುಗಿತು.

ಖತೀಬರಾದ ಮಹಮ್ಮದ್ ಅಲೀ ಸಖಾಫಿ ದ್ಸಿಕ್ರ್, ದುವಾ ಮಜ್ಲೀಸ್ ಗೆ ನೇತೃತ್ವ ನೀಡಿದರು. ಅಲ್ ಅಮೀನ್ ಗೌರವಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರು ಅನುಸ್ಮರಣಾ ಭಾಷಣ ಮಾಡಿದರು.

ಈ ಸಂದರ್ಭ ಸದರ್ ಮುಅಲ್ಲಿಂ ಬಹು ಹಬೀಬ್ ಹಿಮಮಿ, ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ಕೊಪ್ಪದಕಜೆ, ಅಲ್ ಅಮೀನ್ ಅಧ್ಯಕ್ಷರಾದ ಜಾಫರ್ ಸಾದಿಕ್ ಕುಂಭಕ್ಕೋಡ್, ಗೂನಡ್ಕ, ಜಮಾಅತ್ ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಜಮಾಅತ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಪುತ್ರಿ ದರ್ಖಾಸ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಿ.ಕೆ.ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಗೂನಡ್ಕ SYS ಅಧ್ಯಕ್ಷರಾದ ಹನೀಫ್ ಝೈನಿ, ಗೂನಡ್ಕ SSF ಅಧ್ಯಕ್ಷರಾದ ಅಝೀಝ್ ಸೇರಿದಂತೆ ಜಮಾಅತ್ ಪದಾಧಿಕಾರಿಗಳು, ಅಲ್ ಅಮೀನ್ ಪದಾಧಿಕಾರಿಗಳು ಜಮಾಅತ್ ಅಧೀನದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.