ಗುತ್ತಿಗಾರು : ರಾಮಕೃಷ್ಣ ಕಾಟುಕುಕ್ಕೆಯವರಿಗೆ ಗೌರವಾರ್ಪಣೆ

0


ಗುತ್ತಿಗಾರು ಶ್ರೀಕೃಷ್ಣಾ ಭಜನಾ ಮಂದಿರ (ರಿ) ಇದರ ಆಶ್ರಯದಲ್ಲಿ ತಾಲೂಕು ಭಜನಾ ಪರಿಷತ್ ಸುಳ್ಯ ಇದರ ಸಹಯೋಗದೊಂದಿಗೆ ಒಂದು ವಾರ ನಡೆಯುವ ಭಜನೆ, ಸಂಸ್ಕಾರ, ಸಂಸ್ಕೃತಿ ತರಬೇತಿ ಶಿಬಿರದ ೪ನೇ ದಿನವಾದ ಎ ೧೩ ರಂದು ಮದ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ರವರು ತರಬೇತಿದಾರಾಗಿ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.
ಚಿತ್ರದಲ್ಲಿ ಭಜನಾ ಮಂದಿರದ ಅಧ್ಯಕ್ಷ ಬಿ.ವಿ ರವಿಪ್ರಕಾಶ್, ಗೌರವಾಧ್ಯಕ್ಷ ಕಿಶೋರ್ ಬೊಮ್ಮದೇರೆ ,ಮಾಜಿ ಅಧ್ಯಕ್ಷ ಬಿ ಕೆ ಶ್ರೀಧರ್,ಮಾಜಿ ಕಾರ್ಯದರ್ಶಿ ಚಂದ್ರಶೇಖರ ಕಂದಡ್ಕ, ತರಬೇತಿ ಉಸ್ತುವಾರಿ ರಮೇಶ್ ಮೆಟ್ಟಿನಡ್ಕ, ಅಜಿತ್ ಬಾಕಿಲ,ತಬಲ ವಾದಕ ಸಚಿನ್ , ಅಶೋಕ ಬೊಮ್ಮದೇರೆ, ಕುಣಿತ ಭಜನಾ ತರಬೇತಿ ದಾರ ಆನಂದ ಬೋಗಾಯನಕೆರೆ ಮತ್ತು ನಿಶ್ಚಿತ ರಾಮ್ ಇದ್ದರು.