ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕು. ಭಾಗೀರಥಿ ಪರ ಚುನಾವಣಾ ಸಿದ್ದತಾ ಸಭೆ

0

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿದ್ದತಾ ಸಭೆ ಏ. 15ರಂದು ಕಳಂಜ ಗ್ರಾ. ಪಂ. ವ್ಯಾಪ್ತಿಯಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ಕ್ಷೇತ್ರ ಚುನಾವಣಾ ಸಂಚಾಲಕ ಎ.ವಿ ತೀರ್ಥರಾಮ, ಎಸ್.ಎನ್ ಮನ್ಮಥ, ರಾಕೇಶ್ ರೈ ಕೆಡೆಂಜಿ ಭಾಗವಹಿಸಿ ಮಾತನಾಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕು. ಭಾಗೀರಥಿ ಮುರುಳ್ಯರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದರು. ಈ ಸಂದರ್ಭದಲ್ಲಿ ಚುನಾವಣಾ ಅಭಿಯಾನ ಪ್ರಮುಖ ವೆಂಕಟ್ ವಳಲಂಬೆ, ಆಭ್ಯರ್ಥಿಪ್ರಮುಖ್ ವಿನಯ್ ಮುಳುಗಾಡು, ಪ್ರಮುಖರಾದ ಚಂದ್ರ ಕೋಲ್ಚಾರು, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ ಕಳಂಜ, ಸದಸ್ಯರಾದ ಪ್ರೇಮಲತಾ, ಬಾಲಕೃಷ್ಣ ಬೇರಿಕೆ, ಕಮಲ, ಮಾಜಿ ಅಧ್ಯಕ್ಷರುಗಳಾದ ಅಜಿತ್ ರಾವ್ ಕಿಲಂಗೋಡಿ, ಅನಂತಕೃಷ್ಣ ತಂಟೆಪ್ಪಾಡಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ನಾಲ್ಗುತ್ತು, ನಿರ್ದೇಶಕರಾದ ಭಾರತೀಶಂಕರ ಆದಳ, ಕಳಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರವಿಪ್ರಸಾದ್ ರೈ ಕಳಂಜ ಸೇರಿದಂತೆ ಪಕ್ಷದ ಹಿರಿಯರು, ಪ್ರಮುಖರು, ಮಹಿಳಾ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.