ಅರಂತೋಡು: ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ

0

ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ, ಸಮಾಜ ಕಾರ್ಯ ವಿಭಾಗ, ಗ್ರಾಮ ಪಂಚಾಯತ್ ಅರಂತೋಡು ಹಾಗೂ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇದರ ಜಂಟಿ ಆಶ್ರಯದಲ್ಲಿ “ಸ್ವಾವಲಂಬನೆಡೆಗೆ ಒಂದು ಹೆಜ್ಜೆ”ಎಂಬ ಶೀರ್ಷಿಕೆಯಡಿ ಯಲ್ಲಿ ನಾಲ್ಕು ದಿನದ ಕೌಶಲ್ಯ ತರಬೇತಿ ಶಿಬಿರವು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅರಂತೋಡಿನಲ್ಲಿ ನಡೆಯಿತು.

ಈ ಶಿಬಿರದ ಕೊನೆಯ ದಿನ ದಲ್ಲಿ ಸಮರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಶ್ ಯು.ಕೆ ವಹಿಸಿದ್ದರು. ಸಮಾರೋಪ ಸಮಾರಂಭದ ಭಾಷಣಕಾರರಾಗಿ ಅರಂತೋಡು ಸ.ಉ.ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬಿ.ಕೆ ಶಿಬಿರಾರ್ಥಿಗಳಿಗೆ ಶಿಬಿರದ ಮಹತ್ವ ಮತ್ತು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಾವಲಂಬನೆಡೆಗೆ ಒಂದು ಹೆಜ್ಜೆಯನ್ನು ಇಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮೇಶ್, ಶ್ರೀಮತಿ ಮಧುರ ಎಂ .ಆರ್, ಶ್ರೀಮತಿ ಕೃಪಾ ಎ.ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶೋಭಾ ಎ ಸ್ವಾಗತಿಸಿ, ಕೃಪ ಎಎನ್ ವಂದಿಸಿದರು. ಬೇಬಿ ವಿದ್ಯಾ ಮತ್ತು
ನಿಶಾಂತ್ ಎ.ಡಿ ಕಾರ್ಯಕ್ರಮ ನಿರೂಪಿಸಿದರು. ನೆಹರು ಮೆಮೊರಿಯಲ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀಮತಿ ಚಿತ್ರಲೇಖ ಕೆ.ಎಸ್ ಮೇಲ್ವಿಚಾರಕರಾಗಿ ಸಹಕರಿಸಿದರು. ತರಬೇತಿಯಲ್ಲಿ ಒಟ್ಟು120 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಶಿಬಿರದ ಯಶಸ್ವಿಗೆ ಊರವರು ಹಾಗೂ ವಿವಿಧ ಸಂಘ ಸಂಸ್ಥೆಗಳು, ಎ.ಒ.ಎಲ್.ಇ, ಎನ್.ಎಂ.ಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಅರಂತೋಡು, ಯು.ಬಿ ಚಕ್ರ ಲಪಾಣಿ ನವಮಿ ಸ್ಟೋರ್, ಪ್ರಹ್ಲಾದ್ ಕೆ ಸಿ, ದಿನೇಶ್ ಕುಮಾರ್ ಪಿಂಗಾರತೋಟ, ಅನಂತ್ ರಾಜ್ ಎ. ಬಿ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಸಂಪಾಜೆ ವಲಯ, ಚರಣ್ ರಾಜ್ ಎ.ಯು ಅಡ್ಕಬಳೆ ಕಸ್ಟ್ರಕ್ಷನ್, ಅರಂತೋಡು, ಸ್ಪಂದನ ಗೆ ಳೆಯರ ಬಳಗ (ರಿ.) ಅಡ್ತಲೆ ಅರಂತೋಡು ಗ್ರಾಮ, ಸುಳ್ಯ ತಾಲೂಕು ಹಾಗೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಹಕರಿಸಿದರು.