ದಿನೇಶ್ ಕುಂಜತ್ತಾಡಿ ನಿಧನ

0


ಬಳ್ಪ ಗ್ರಾಮದ ಕುಂಜತ್ತಾಡಿ ದಿ. ಲಕ್ಷ್ಮಣ ಗೌಡ ಕುಂಜತ್ತಾಡಿಯವರ ಪುತ್ರ ದಿನೇಶ್ ಕುಂಜತ್ತಾಡಿಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಏ. 13ರಂದು ನಿಧನರಾದರು. ಇವರಿಗೆ 42ವರ್ಷ ವಯಸ್ಸಾಗಿತ್ತು. ಇವರ ಪತ್ನಿ ಶ್ರೀಮತಿ ಅಸೌಖ್ಯದಿಂದ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರು. ಬಳ್ಪ ಪಂಜ ಭಾಗದಲ್ಲಿ ಇಲೆಕ್ಟ್ರೀಷಿಯನ್, ಪ್ಲಂಬಿಂಗ್ ಮತ್ತು ಅಡುಗೆ ಕೆಲಸ ಮಾಡುತ್ತಿದ್ದ ಮೃತರು ತಾಯಿ ಶ್ರೀಮತಿ ಸಣ್ಣಮ್ಮ, ಸಹೋದರಿ ಶ್ರೀಮತಿ ಪ್ರಿಯಾ ರಾಜ್ ಕುಮಾರ್ ಅತ್ಯಾಡಿ ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.