ಚೆಂಬು : ಶ್ರೀ ಭಗವಾನ್ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಜಿಲ್ಲಾ ಪ್ರಶಸ್ತಿ ವಿಜೇತ ಶ್ರೀ ಭಗವಾನ್ ಸಂಘ ,ಚೆಂಬು .ಇದರ 2023.24 ರ ಸಾಲಿನ ನೂತನ ಅದ್ಯಕ್ಷರಾಗಿ ಶರತ್ ಕಾಸ್ಪಾಡಿ ಮತ್ತು ಕಾರ್ಯದರ್ಶಿಗಳಾಗಿ ಹರ್ಷಿತ್ ನೆಲ್ಲಿಪುಣಿ ರವರು ಭಾಗಮಂಡಲ ಪಟ್ಟಿಯಲ್ಲಿನ ಹೋಂಸ್ಟೇಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಶರತ್ ರವರು ಛಾಯಾಗ್ರಾಹಕರಾಗಿದ್ದರೆ ,ಹರ್ಷಿತ್ ರವರು ಪಯಸ್ವಿನಿ ಸೊಸೈಟಿಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ಲೆಕ್ಕಪತ್ರ ಪರಿಶೀಲನೆ ಮಾಡಿರುವುದಲ್ಲದೆ ,ಮುಂದಿನ ವರ್ಷದಲ್ಲಿ ಸಂಘದ ವತಿಯಿಂದ ಕೈಗೊಳ್ಳಬೇಕಿರುವ ಚಟುವಟಿಕೆಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಯಿತು.
ಸಂಘದ ಗೌರವಾದ್ಯಕ್ಷರಾದ ಅನಂತ್ ಊರುಬೈಲು ಒಳಗೊಂಡಂತೆ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.