ಪಂಜ:ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯದತ್ತ ವೃತ ಪೂಜೆ

0

ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್ ,ಒಡಿಯೂರು ಗುರುದೇವ ದತ್ತ ಸಂಸ್ಥಾನಮ್ ,ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಂಜ ವಲಯ ಇದರ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಸತ್ಯದತ್ತ ವೃತ ಪೂಜೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಎ.12ರಂದು ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಸಂಸ್ಥಾಪಕರಾದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಿಮಾ ದೇರಾಜೆ, ಒಡಿಯೂರು ಯೋಜನೆ ಶ್ರೀ ಗ್ರಾಮ ವಿಕಾಸ ಯೋಜನಾ ನಿರ್ದೇಶಕ ಕಿರಣ್ ಊರ್ವ, ಪಂಜ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ಒಡಿಯೂರು ಗ್ರಾಮ ವಿಕಾಸ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ಶಾರದಾಮಣಿ ಯಸ್ ರೈ, ತಾಲೂಕು ಘಟಕ ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ನಿಕಟಪೂರ್ವಧ್ಯಕ್ಷ ಪ್ರೇಮಾನಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


. ಸನ್ಮಾನ ಸಮಾರಂಭ:
ಇದೇ ವೇಳೆ ಮಾಜಿ ಸೈನಿಕ ಲಕ್ಷ್ಮಣ ಬೇರ್ಯ, ಪ್ರಗತಿಪರ ಹೈನುಗಾರ ದೇವದಾಸ್ ರೈ ಕೆಬ್ಲಾಡಿ , ನಾಟಿ ವೈದ್ಯ ಬಾಲಕೃಷ್ಣ ಚಿದ್ಗಲ್, ಶೈಕ್ಷಣಿಕ ಸಾಧಕ ಅಶ್ವಥ್ ಕೆ.ಜೆ, ರಾಷ್ಟ್ರೀಯ ಕಬಡ್ಡಿ ಆಟಗಾರ ಅಭಿಜಿತ್ ಎಸ್ ಕೆ, ಸಮಾಜ ಸೇವಕ ಸುಜಿತ್ ಪಂಬೆತ್ತಾಡಿ ಯವರನ್ನು ಗುರುತಿಸಿ ಸನ್ಮಾನಿಸಲಾಯಿತು.ಎ.2ರಂದು ನಡೆದ ಕ್ರಿಡೋತ್ಸವದಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಣೆ ನಡೆಯಿತು.


ಕಾರ್ಯಕ್ರಮದಲ್ಲಿ ವಿನೋದ್ ಬೊಳ್ಮಲೆ ಸ್ವಾಗತಿಸಿದರು. ವಲಯ ಸಂಯೋಜಕಿ ಶ್ರೀಮತಿ ಜಯಶ್ರೀ ವರದಿ ವಾಚಿಸಿದರು. ಯೋಜನಾ ನಿರ್ದೇಶಕರಾದ ಕಿರಣ್ ಊರ್ವ ಪ್ರಸ್ತಾವನೆಗೆ ಗೈದರು. ಶ್ರೀಮತಿ ಮಂಜುಳಾ ಅಶೋಕ್ ಕುಮಾರ್ ನಾಗತೀರ್ಥ ನಿರೂಪಿಸಿದರು .ಶ್ರೀಮತಿ
ಸವಿತಾ ನಾಗತೀರ್ಥ, ಶ್ರೀಮತಿ ರೇಷ್ಮಾ ಐನೆಕ್ಕಿದು, ಶ್ರೀಮತಿ ಜ್ಯೋತಿ ರೈ ಕೇನ್ಯ, ಶ್ರೀಮತಿ ಲತಾ ಸುಬ್ರಹ್ಮಣ್ಯ, ಶ್ರೀಮತಿ ಶೋಭಾ ಬಳ್ಪ, ಶ್ರೀಮತಿ
ಪೂರ್ಣಿಮಾ ಐವತ್ತೊಕ್ಲು ಸನ್ಮಾನ ಪತ್ರ ವಾಚಿಸಿದರು. ಸೇವಾ ದೀಕ್ಷಿತೆ ಶ್ರೀಮತಿ ಸರಿತ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಮುಂಜಾನೆ ಶ್ರೀ ಸತ್ಯ ದತ್ತ ವೃತ ಪೂಜೆ ಆರಂಭ , ಶ್ರೀ ಶಾರದಾಂಬ ಭಜನಾ ಮಂಡಳಿ, ಪಂಜ ಕಾರ್ತಿಕೇಯ ಭಜನಾ ಮಂಡಳಿ ಕುಕ್ಕೆ ಸುಬ್ರಹ್ಮಣ್ಯ, ತ್ರಿಶೂಲಿನ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾಂಜಿ ಬಳ್ಪ ಇವರ ವತಿಯಿಂದ ಕುಣಿತ ಭಜನೆ ನಡೆಯಿತು.