ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಪಿ.ಬಿ.ಹರೀಶ್ ರೈ

0

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರ್.ಸಿ.ಭಟ್, ಹರೀಶ್ ಮೋಟುಕಾನ ಆಯ್ಕೆ

ಮಂಗಳೂರು ಪ್ರೆಸ್ ಕ್ಲಬ್ ನ 2023-2026ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರ, ಸುಬ್ರಹ್ಮಣ್ಯದ ಪಿ.ಬಿ.ಹರೀಶ್ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸುಳ್ಯ ಮೂಲದ ವಿಜಯ ಕರ್ನಾಟಕ ಪತ್ರಿಕೆ ಮಂಗಳೂರು ಆವೃತ್ತಿಯ ಚೀಫ್ ಕಾಪಿ ಎಡಿಟರ್ ಆರ್.ಸಿ.ಭಟ್ ಹಾಗೂ ವಿಜಯವಾಣಿ ದಿನಪತ್ರಿಕೆಯ ಸೀನಿಯರ್ ರಿಪೋರ್ಟರ್ ಹರೀಶ್ ಮೋಟುಕಾನ ಚುನಾಯಿತರಾಗಿದ್ದಾರೆ.

ಉಪಾಧ್ಯಕ್ಷರಾಗಿ ಮುಹಮ್ಮದ್ ಆರಿಫ್ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯದರ್ಶಿಯಾಗಿ ಪುಷ್ಪರಾಜ್ ಬಿ.ಎನ್., ಖಜಾಂಜಿಯಾಗಿ ವಿಜಯ ಕೋಟ್ಯಾನ್ ಪಡು, ಆಂತರಿಕ ಲೆಕ್ಕ ಪರಿಶೋಧಕರಾಗಿ ಜಿತೇಂದ್ರ ಕುಂದೇಶ್ವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಇತರ ಸದಸ್ಯರಾಗಿ ಸತೀಶ್ ಇರಾ, ದಯಾನಂದ ಕುಕ್ಕಾಜೆ , ಆತ್ಮಭೂಷಣ್, ಬಿ.ಎಸ್.ಜೀವನ್, ಕೆ.ವಿಲ್ಪ್ರೆಡ್ ಡಿಸೋಜಾ ಆಯ್ಕೆಯಾಗಿದ್ದಾರೆ.