ಕನಕಮಜಲು: ಅವನಿ ವಿಹಾರಂ ಭರತನಾಟ್ಯ ಶಿಬಿರ ಸಮಾರೋಪ

0


ಕನಕಮಜಲು ಗ್ರಾಮದ ಕಲಾ ಗ್ರಾಮದಲ್ಲಿ, ನಡೆದ ‘ಅವನಿ ವಿಹಾರಂ’ ಭರತನಾಟ್ಯ ವಸತಿ ಶಿಬಿರವು ಎ.16ರಂದು ಸಮಾರೋಪಗೊಂಡಿತು.

ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಎ.13ರಿಂದ ಎ.16ರವರೆಗೆ ಅವನಿ ವಿಹಾರಂ ಭರತನಾಟ್ಯ ವಸತಿ ಶಿಬಿರವು ಜರುಗಿತು.


ಮುಖ್ಯ ಅತಿಥಿಗಳಾಗಿ ಪರಿಶೋಧಕರಾದ ಗಣೇಶ್ ಭಟ್ ಅವರು ಶಿಭಿರಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ, ಮೆಚ್ಚುಗೆಯ ಮಾತನ್ನಾಡಿದರು.

ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ನಿರ್ದೇಶಕಿ ಡಾ. ಚೇತನ ರಾಧಾಕೃಷ್ಣ ಮೂರ್ಜೆ, ರಾಧಾಕೃಷ್ಣ ಮೂರ್ಜೆ, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಗಿರಿಧರ ಗೌಡ ಮೂರ್ಜೆ, ಹರೀಶ್ ಮೂರ್ಜೆ ಉಪಸ್ಥಿತರಿದ್ದರು.