ಸಚಿವ ಅಂಗಾರರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ

0

ಪಕ್ಷದ ಗೆಲುವಿಗೆ ನಿರಂತರ ಶ್ರಮ : ಸಚಿವ ಎಸ್.ಅಂಗಾರ

ನನಗೆ ಎದುರಾಳಿಯೇ ಇಲ್ಲ : ಭಾಗೀರಥಿ ‌ಮುರುಳ್ಯ

ಸುಳ್ಯದಲ್ಲಿ ಇಂದು ಬಿಜೆಪಿ‌ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಸಚಿವ ಎಸ್.ಅಂಗಾರರ ಕಾಲು ಮುಟ್ಟಿ ಆಶೀರ್ವಾದ ಪಡೆದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಭಾಗೀರಥಿ ಮುರುಳ್ಯ ರವರು “ಕ್ಷೇತ್ರ ತಿರುಗಾಟ ಮಾಡುತ್ತಿದ್ದೇವೆ. ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಬಾರಿ ಬಿಜೆಪಿ ಸುಳ್ಯದಲ್ಲಿ ಗೆಲ್ಲುವುದು ನಿಶ್ಚಿತ” ಎಂದು ಹೇಳಿದರಲ್ಲದೆ, “ಬಿಜೆಪಿಗೆ ಎದುರಾಳಿ ಅಭ್ಯರ್ಥಿಗಳೇ ಇಲ್ಲ” ಎಂದು ಪತ್ರರ‍್ತರ ಪ್ರಶ್ನೆಗೆ ಉತ್ತರಿಸಿದರು.

ಸಚಿವ ಎಸ್.ಅಂಗಾರ ಮಾತನಾಡಿ ಪಕ್ಷದ ಗೆಲುವಿಗೆ ನಿರಂತರ ಶ್ರಮವಹಿಸಲಾಗುವುದು. ಬಿಜೆಪಿಯ ಗೆಲುವಿನ ಹೊಣೆಯನ್ನು ನಾನು ಹಾಗೂ ಕಾರ್ಯಕರ್ತರೆ ತೆಗೆದುಕೊಳ್ಳುತ್ತೇವೆ.ಅತ್ಯಧಿಕ ಮತಗಳಿಂದ ನಮ್ಮ ಪಕ್ಷದ ಅಭ್ರ‍್ಥಿ ಗೆಲುವು ಸಾಧಿಸಲಿದೆ ಎಂದ ಅವರು, ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ.

ಅದಕ್ಕೆ ಮತದಾರರು‌ ಕಿವಿಗೊಡುವುದಿಲ್ಲ ಎಂದು ಹೇಳಿದರು.ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಇದ್ದರು.