ಆಶಾ ತಿಮ್ಮಪ್ಪ ಗೌಡ ತವರಿಗೆ ಭೇಟಿ

0


ಮೋಂಟಡ್ಕ ಹಾಗೂ ಸೇರ್ಕಜೆ ಮನೆಗೆ ಆಗಮಿಸಿ ಹಿರಿಯರ ಅಶೀರ್ವಾದ ಪಡೆದ ಪುತ್ತೂರು ಬಿಜೆಪಿ ಅಭ್ಯರ್ಥಿ

ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಅಯ್ಕೆಯಾಗಿರುವ ಮಾಜಿ ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಗೌಡರು ಎ.18ರಂದು ಬೆಳಿಗ್ಗೆ ತನ್ನ ತವರೂರಾದ ಸುಳ್ಯದ ಸೋಣಂಗೇರಿ ಸಮೀಪದ ಹೊಸಗದ್ದೆಯ ಮೋಂಟಡ್ಕ ಹಾಗೂ ಸೇರ್ಕಜೆ ಮನೆಗೆ ಭೇಟಿ ನೀಡಿ ಹಿರಿಯರ ಅಶೀರ್ವಾದ ಪಡೆದರು.


ಈ ಸಂದರ್ಭದಲ್ಲಿ ಸ್ಥಳೀಯರಾದ ಲ|ಗಂಗಾಧರ ರೈ ಆಶಾ ತಿಮ್ಮಪ್ಪ ಕುರಿತು ಮಾತನಾಡಿ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.


ಈ ಸಂದರ್ಭದಲ್ಲಿ ಆಶಾ ತಿಮ್ಮಪ್ಪರ ಸಹೋದರರಾದ ಬಾಲಶೇಖರ, ಗೌರಿಶಂಕರ, ಜಾಲ್ಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಭಾಸ್ಕರ ಹಾಗೂ ಸಂಬಧಿಕರಾದ ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಗೌತಮ್ ಸೇರ್ಕಜೆ, ಶಾಂತರಾಮ್, ಆನಂತರಾಮ್, ವಸಂತರಾಮ್, ನವೀನ್ ಮುರೂರು, ದಿವಾಕರ, ಸಜ್ಜನ್, ರಂಜನ್, ರಜತ್ , ಸೂರಜ್, ಹರೀಶ, ಮುಕುಂದ, ವಸಂತ, ಚಂದ್ರಪ್ರಭ, ಸರಳ, ಸುಲೋಚನ,ಲೋಲಾಕ್ಷಿ, ಪುಷ್ಪಾವತಿ, ಯೋಗಿತಾ, ನಿಶಾ, ನೂತನ್, ವಸಂತ ಮೋಂಟಡ್ಕ, ಮಮತ, ಪ್ರದ್ವಿನ್, ಸೂರಜ್ ಕಂಪ, ಸುಜಿತ್ ಕುಂಡಡ್ಕ ಮತ್ತು ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಪಾಪೆಮಜಲು, ಅರಿಯಡ್ಕ ಪಂಚಾಯತ್ ಸದಸ್ಯೆ, ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಸಹ ಸಂಚಾಲಕಿ ಭಾರತಿವಸಂತ್ , ನೆಟ್ಟಣಿಗೆಮುಡ್ನೂರು ಗ್ರಾ.ಪಂ.ಸದಸ್ಯೆ, ಪುತ್ತೂರು ತಾ.ಗ್ರಾಮಾಂತರ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಪ್ರಪುಲ್ಲಾ ರೈ ಮೊದಲಾದವರು ಉಪಸ್ಥಿತರಿದ್ದರು.

ಆಶಾ ತಿಮ್ಮಪ್ಪ ಗೌಡರು ಎ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ.