ಸುಳ್ಯದಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ; ಪೊಲೀಸ್ ಬಿಗಿ ಬಂದೋಬಸ್ತ್

0

ಸುಳ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಲುವಾಗಿ ರೋಡ್ ಶೋ ಇದ್ದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಎಲ್ಲೆಂದರಲ್ಲಿ ಜನಸಾಗರವೇ ತುಂಬಿತ್ತು.


ಈ ಸಂದರ್ಭದಲ್ಲಿ ಪುತ್ತೂರು ಡಿ.ವೈ.ಎಸ್ಪಿ. ಡಾ.ವೀರಯ್ಯ ಹಿರೇಮಠ್ ನೇತೃತ್ವದಲ್ಲಿ ಪೊಲೀಸ್ ತಂಡ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕೆಎಸ್ಆರ್ ಪಿ ತುಕಡಿ ಸಿಬ್ಬಂದಿಗಳು, ಅರೆಸೇನಾ ತುಕಡಿ ಸಿ ಆರ್ ಪಿ ಎಫ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿಗಳು ನಗರದಾದ್ಯಂತ ಅಲ್ಲಲ್ಲಿ ಕಂಡುಬರುತ್ತಿದ್ದರು.


ನಾಮಪತ್ರ ಸಲ್ಲಿಸುವ ತಾಲೂಕು ಕಚೇರಿಯ ಕೇಂದ್ರದ ಸುತ್ತಲು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ಅಭ್ಯರ್ಥಿಯೊಂದಿಗೆ ಕೇವಲ 6 ಮಂದಿಗೆ ಅವಕಾಶ ಕಲ್ಪಿಸಲಾಗಿತ್ತು.


ಸುಳ್ಯ ವೃತ್ತ ನಿರೀಕ್ಷಕ ಸಿ ಎಂ ರವೀಂದ್ರ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್, ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಸುಹಾಸ್, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಮಂಜುನಾಥ್, ಉಪ್ಪಿನಂಗಡಿ ಪೊಲೀಸ್ ಠಾಣಾ ವೃತ್ತ
ನಿರೀಕ್ಷಕ ರವಿ ಹಾಗೂ ಇನ್ನೂ ಹಲವಾರು ಪೊಲೀಸ್ ಅಧಿಕಾರಿಗಳು ಇಂದು ಸುರಕ್ಷತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.