ಕಾಯರ್ತೋಡಿ ಮಹಾವಿಷ್ಣುದೇವಸ್ಥಾನದಲ್ಲಿ “ಬಣ್ಣ” ರಾಜ್ಯ ಮಟ್ಟದ ಬೇಸಿಗೆ ಶಿಬಿರ ಸಮಾರೋಪ

0

ಸುಳ್ಯದಲ್ಲಿ ತರಬೇತಿ ಕಲಾ ಶಾಲೆಗಳಿಂದ ಕಲಾ ಕ್ಷೇತ್ರಕ್ಕೆ ಪುನಶ್ಚೇತನ ಲಭಿಸಿದೆ- ಸುಬ್ರಾಯ ಸಂಪಾಜೆ

ಸುಳ್ಯ ರಂಗಮಯೂರಿ ಕಲಾ ಶಾಲೆಯ ಆಯೋಜನೆಯಲ್ಲಿ ಕಳೆದ ಒಂದು ವಾರದಿಂದ ಜರುಗಿದ ರಾಜ್ಯ ಮಟ್ಟದ ಮಕ್ಕಳ ಬಣ್ಣ ಬೇಸಿಗೆ ಶಿಬಿರ 2023 ರ ಸಮಾರೋಪ ಸಮಾರಂಭವು ಎ.18 ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.


ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ನಿವೃತ್ತ ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ, ಮಡಿಕೇರಿ ಆಕಾಶವಾಣಿಯ ಮುಖ್ಯ ಉದ್ಘೋಷಕ ಸುಬ್ರಾಯ ಸಂಪಾಜೆ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಾರ್ಯದರ್ಶಿ ಡಾ.ಐಶ್ವರ್ಯ ಕೆ.ಸಿ, ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರಶ್ಮಿ ನೆಕ್ರಾಜೆ, ಸಂಪನ್ಮೂಲ ವ್ಯಕ್ತಿ ಎ.ಟಿ.ಕುಸುಮಾಧರ, ಮೈಸೂರು ಸಿಗ್ನೇಚರ್ ಡ್ಯಾನ್ಸ್ ಕಂಪೆನಿ ಅಧ್ಯಕ್ಷ ವಿನೋದ್ ಕರ್ಕೇರ, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು.


ಆರಂಭದಲ್ಲಿ ಕಲಾ ಶಾಲೆಯ ಸೀನಿಯರ್ ವಿದ್ಯಾರ್ಥಿಗಳು ಶಿಬಿರ ಗೀತೆ ಹಾಡಿದರು.ಕು. ಸಿಂಚನ ಪುತ್ತಿಲ ಸ್ವಾಗತಿಸಿದರು.
ಕು. ಅನುಶ್ರೀ ಕೇಕಡ್ಕ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.

ಮಕ್ಕಳ ವಿಕಸನದ ಉದ್ದೇಶ ವಿರಿಸಿಕೊಂಡು ಇಂತಹ ಶಿಬಿರದ ಆಯೋಜನೆಯಾಗಿದೆ. ಸರಕಾರಕ್ಕೆ ಸಂಬಂಧಿಸಿದ ಇಲಾಖೆಯಿಂದ ಇಂತಹ ಶಿಬಿರಗಳಿಗೆ ಪ್ರೋತ್ಸಾಹ ಸಿಗುವಂತಾಗಲಿ-
ಉಮೇಶ್ ಪಿ.
ಕೆ

ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಮತ್ತು ಚಟುವಟಿಕೆಗಳನ್ನು ಹೊರ ತೆಗೆಯಲು ಪೂರಕವಾಗಿ ಇಂತಹ ಶಿಬಿರ ಕಾರ್ಯವೆಸಗುತ್ತಿರುವುದು ಶ್ಲಾಘನೀಯ-
ಅಚ್ಚುತ ಅಟ್ಲೂರು

ಬೆಂಕಿ ಪೊಟ್ಟಣದಲ್ಲಿ ಕಾಣಿಸದಿರುವ ಬೆಂಕಿಯ ಶಕ್ತಿ ಇದೆ. ಮಕ್ಕಳಲ್ಲಿಯೂ ಕಾಣದ ಶಕ್ತಿ ಇರುವುದು. ಇಂತಹ ಶಿಬಿರದಿಂದ ಅದನ್ನು ಹೊರಚೆಲ್ಲುವ ಅವಕಾಶ ಸಿಗುವುದು. ಮಕ್ಕಳ ಬೆಳವಣಿಗೆಗೆ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ-
ಡಾ.ಐಶ್ವರ್ಯ

ಸುಳ್ಯದಲ್ಲಿರುವ ರಂಗ ಕಲಾ ಶಾಲೆಗಳಿಂದ ಮತ್ತೆ ಕಲಾ ಕ್ಷೇತ್ರಕ್ಕೆ ಪುನಶ್ಚೇತನ ದೊರಕಿದೆ. ಮಕ್ಕಳು ತಮ್ಮ ಅಭಿರುಚಿಗೆಅನುಸಾರವಾಗಿಮುಂದುವರಿಯುವಂತಾಗಬೇಕು. ವೃತ್ತಿಯೊಂದಿಗೆ ಕಲೆಯನ್ನು ಪ್ರವೃತ್ತಿಯಾಗಿ ಬಳಸಿಕೊಂಡು ಸಾಧಕರಾಗುವಂತಾಗಲಿ- ಸುಬ್ರಾಯ ಸಂಪಾಜೆ

ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಅದರಲ್ಲಿ ನಾವು ಏನುಬರೆಯುತ್ತೇವೆ ಅದು ಸಾಕಾರಗೊಳ್ಳುತ್ತದೆ. ಬರಿಯಬೇಕಾದ ಕೆಲಸ ಜವಬ್ದಾರಿಪೋಷಕರದ್ದಾಗಿರುತ್ತದೆ. ಬದುಕಿನ ಪರೀಕ್ಷೆ ಬರೆಯಲು ಶಿಬಿರ ಪೂರಕವಾಗುವುದು
-ರಶ್ಮಿ ನೆಕ್ರಾಜೆ

ರಂಗಮಯೂರಿ ಕಲಾ ಶಾಲೆ ಆಧುನಿಕ ಕಾಲದಲ್ಲಿ ಇರುವ ಸೂಪರ್ ಮಾರ್ಕೆಟ್. ಇಲ್ಲಿ ಎಲ್ಲಾ ಕಲಾ ಪ್ರಕಾರ ಲಭಿಸುವುದು- ಎ.ಟಿ.ಕುಸುಮಾಧರ

ಮಕ್ಕಳ ಬೆಳವಣಿಗೆಗೆ
ರಂಗಮಯೂರಿ ಕಲಾ ಶಾಲೆಯು ವೇದಿಕೆಯಾಗಿದೆ-
ವಿನೋದ್ ಕರ್ಕೇರ

ಶಿಬಿರದಲ್ಲಿ ಬೀದಿ ನಾಟಕ ಪ್ರಥಮವಾಗಿ ಅಳವಡಿಸಿಕೊಳ್ಳಲಾಗಿದೆ. ದೇಸಿಯ ಸಂಸ್ಕಾರ ಸಂಸ್ಕೃತಿಗೆ ಹಾಗೂ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಲಾಗಿದೆ- ಲೋಕೇಶ್ ಊರುಬೈಲು