ಸುಳ್ಯ ಶ್ರೀ ಶಾರದ ಮಹಿಳಾ ಪಿಯು ಕಾಲೇಜಿನಲ್ಲಿ ಉಚಿತ ಸ್ಪೋರ್ಟ್ಸ್ ಕ್ಯಾಂಪ್ : ಉದ್ಘಾಟನೆ

0

ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಇಲ್ಲಿ ಒಂದು‌ವಾರಗಳ ಕಾಲ ನಡೆಯುವ ಸ್ಪೋರ್ಟ್ಸ್ ‌ಕ್ಯಾಂಪ್‌ಗೆ ಎ. 19 ರಂದು ಚಾಲನೆ ನೀಡಲಾಯಿತು.
ಶಿಬಿರದಲ್ಲಿ 13 ರಿಂದ 17 ವರ್ಷದ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶವಿದ್ದು ಏಪ್ರಿಲ್ 25 ರವರೆಗೆ ನಡೆಯಲಿದೆ.


ಶಿಬಿರದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಗಧಾಧರ ಮುಖ್ಯೋಪಾಧ್ಯಾಯರು ಜ್ಞಾನದೀಪ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಲಿಮಲೆ ಇವರು ಉಪಸ್ಥಿತರಿದ್ದರು. ಶಾರದಾ ಹೆಣ್ಮಕ್ಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಭಾರತಿ ಪಿ ರವರು ಶುಭ ಹಾರೈಸಿದರು. ವೇದಿಕೆಯಲ್ಲಿ ಕ್ರೀಡಾ ತರಬೇತುದರಾದ ಚಂದ್ರಶೇಖರ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ನಾಗರಾಜ ರಂಗನಾಥ, ಬಾಲಚಂದ್ರ ದೈಹಿಕ ಶಿಕ್ಷಣ ನಿರ್ದೇಶಕರುಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾವತಿ ಎಸ್ ರವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ದಯಾಮಣಿ.ಕೆ .ಪ್ರಾ ಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಉಪನ್ಯಾಸಕ ದಾಮೋದರ ಧನ್ಯವಾದ ಸಮರ್ಪಿಸಿದರು. ಉಪನ್ಯಾಸಕಿ ಸ್ವರ್ಣಕಲ .ಎ .ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.