‘ರವಿಕೆ ಪ್ರಸಂಗ’ ಸಿನಿಮಾದ ಟೀಸರ್ ಬಿಡುಗಡೆ

0

ಸಂತೋಷ್ ಕೊಡೆಂಕೇರಿ ಚಿತ್ರಕಥೆ ಬರೆದು ನಿರ್ದೇಶಿಸಿರುವ ಸಿನಿಮಾ


ಸಂಪಾಜೆ, ಸುಳ್ಯ ಈ ಕಡೆಯಲ್ಲಿ ಚಿತ್ರೀಕರಣ

ಸಂತೋಷ್ ಕೊಡೆಂಕೇರಿ ಚಿತ್ರಕಥೆ ಬರೆದು ನಿರ್ದೇಶಿಸಿರುವ “ರವಿಕೆ ಪ್ರಸಂಗ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದು. ವಿಶೇಷ ಏನೆಂದರೆ ಈ ಚಿತ್ರದ ಟೀಸರ್‌ನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದ್ದು, ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ನಟಿಸಿದ್ದಾರೆ. ಚಿತ್ರವನ್ನು ಸಂಪೂರ್ಣವಾಗಿ ದಕ್ಷಿಣ ಕನ್ನಡದ ಸಂಪಾಜೆ, ಸುಳ್ಯ ಈ ಕಡೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.

“ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ “ರವಿಕೆ ಪ್ರಸಂಗ’ ತಯಾರಾಗಿದ್ದು, ಚಿತ್ರಕ್ಕೆ ಶಂತನು ಮಹರ್ಷಿ, ನಿರಂಜನ್ ಗೌಡ, ಗಿರೀಶ್ ಎಸ್ ಎಂ, ಶಿವರುದ್ರಯ್ಯ ಎಸ್.ವಿ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ.

ಸೀರೆ ಅನ್ನೋದು ಎಲ್ಲಾ ಹೆಣ್ಣುಮಕ್ಕಳ ಆಸೆ. ಸೀರೆ ಒಂದೇ ಚೆನ್ನಾಗಿದ್ದರೆ ಸಾಲದು, ಅದರ ರವಿಕೆ ಕೂಡಾ ಅಷ್ಟೇ ಚೆನ್ನಾಗಿ, ಸುಂದರವಾಗಿ, ಒಳ್ಳೆ ಫಿಟ್ಟಿಂಗ್ ಅಲ್ಲಿ ಇರಬೇಕು. ಒಂದು ಸೀರೆ ರವಿಕೆ ಸರಿಯಾಗಿಲ್ಲ ಅಂದರೆ ಏನೆಲ್ಲಾ ಪ್ರಸಂಗಗಳು ನಡೆಯಬಹುದು ಅನ್ನೋದನ್ನ ಹೇಳಲು ಚಿತ್ರವೊಂದು ತಯಾರಾಗಿದೆ.

“ಚಿತ್ರಕಥೆ ಪಾವನ ಅವರದ್ದು. ಚಿತ್ರವನ್ನು ಸಂಪೂರ್ಣವಾಗಿ ದಕ್ಷಿಣ ಕನ್ನಡ, ಸುಳ್ಯ, ಸಂಪಾಜೆ ಆ ಕಡೆಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ದಕ್ಷಿಣ ಕನ್ನಡದ ಭಾಷಾ ಶೈಲಿಯಲ್ಲಿ ಮೂಡಿಬಂದಿದೆ. ಲೋಕೇಶನ್ ಕೂಡಾ ಅಷ್ಟೇ ಚೆನ್ನಾಗಿ ಬಂದಿದೆ. ಕಲಾವಿದರು ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಹೇಳಿಮಾಡಿಸಿದ ಹಾಗೆ ಸಿಕ್ಕರು. ಚಿತ್ರದಲ್ಲಿ ಮೂರು ಹಾಡುಗಳಿವೆ. ಚಿತ್ರದ ಕೆಲಸಗಳು ಕೊನೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಟ್ರೇಲರ್ ಮೂಲಕ ಬರುತ್ತೇವೆ. ಶೀಘ್ರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕ ಸಂತೋಷ್ ತಿಳಿಸಿದ್ದಾರೆ.

ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕವತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಹನುಮಂತೇ ಗೌಡ, ಖುಷಿ ಆಚಾರ್ , ಹನುಮಂತ್ ರಾವ್ ಕೆ ಚಿತ್ರದ ತಾರಾ ಬಳಗದಲ್ಲಿದ್ದಾರೆ.