ಪಂಜದಲ್ಲಿ7ನೇ ದಿನದ ಉಚಿತ ಭಜನಾ ತರಬೇತಿ ಶಿಬಿರ

0


ಇಂದು ಸಂಜೆ (ಎ.21) ಸಮಾರೋಪ ಸಮಾರಂಭ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಪಂಜ ಮತ್ತು ನಿಂತಿಕಲ್ಲು ವಲಯ , ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ
ಪಂಜ ಮತ್ತು ನಿಂತಿಕಲ್ಲು ವಲಯ ಇದರ ಆಶ್ರಯದಲ್ಲಿ 14ನೇ ವರ್ಷದ ಉಚಿತ ಭಜನಾ ತರಬೇತಿ ಶಿಬಿರವು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಎ.15 ರಂದು ಆರಂಭಗೊಂಡಿದ್ದು ಎ.21 ರಂದು 7ನೇ ದಿನ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ, ವಿಶ್ವನಾಥ ರೈ ಅರ್ಗುಡಿ ತಂಡದವರು ಭಜನಾ ತರಬೇತಿ ನೀಡಿದರು.ಜೊತೆಗೆ ರಮೇಶ್ ಮೆಟ್ಟಿನಡ್ಕ,ಆನಂದ ಬೋಗಾಯನಕೆರೆ ಸವಿತಾ ಕರಿಕಳ, ಪ್ರವೀಣ್, ಹೇಮಂತ್ ಮೊದಲಾದವರು ತರಬೇತಿ ನೀಡಿದರು.ಇವರಿಗೆ ತಬಲದಲ್ಲಿ ಸಚಿನ್ ಏನೆಕಲ್ಲು,ಮೃದಂಗದಲ್ಲಿ ವೆಂಕಟ್ರಮಣ ಆಚಾರ್ಯ ಸಹಕರಿಸಿದರರು.ತರುಬೇತುದಾರೆ
ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ ಆಚಾರ್ಯ ಕಲ್ಮಡ್ಕ ನಿರೂಪಿಸಿದರು.

ಭಜನಾ ಮಂಡಳಿ ಅಧ್ಯಕ್ಷ, ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಭಜನಾ ಮಂಡಳಿ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ,ಶಿಕ್ಷಕಿ ಶ್ರೀಮತಿ ಸುಗಂಧಿ ಬಾಲಕೃಷ್ಣ ಪುತ್ಯ, ಶಿಬಿರದ ಸಂಚಾಲಕ ಕುಸುಮಾಧರ ಕೆಮ್ಮೂರು,ಜಿನ್ನಪ್ಪ ಗೌಡ ಗುಂಡಡ್ಕ ಮೊದಲಾದವರು ಮೊದಲಾದವರು ಉಪಸ್ಥಿತರಿದ್ದರು.


ಇಂದು ಸಮಾರೋಪ:
ಎ.21 ರಂದು ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು, ಅರ್ಧ ಏಕಾಹ ಭಜನೆ, ಶ್ರೀ ಸತ್ಯನಾರಾಯಣ ದೇವರ ಪೂಜೆ ಜರುಗಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಯವರು ಆಶೀರ್ವಚನ ನೀಡಲಿದ್ದಾರೆ. ಭಜನಾ ತರಬೇತಿ ಶಿಬಿರದ ಸಂಚಾಲಕ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಉದ್ಘಾಟಿಸಲಿದ್ದಾರೆ. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ಅರ್ಧ ಎಕಾಹ ಭಜನೆಯನ್ನು ಉದ್ಘಾಟಿಸಲಿದ್ದಾರೆ.
ರಾಜ್ಯ ಭಜನಾ ಪರಿಷತ್ ಕಾರ್ಯದರ್ಶಿ ಪುರುಷೋತ್ತಮ ಪಿ ಕೆ, ಯೋಜನಾಧಿಕಾರಿ ನಾಗೇಶ್ ಪಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಮೇಲ್ವಿಚಾರಕರಾದ ಶ್ರೀಮತಿ ಪ್ರಿಯಾ ಎನ್, ಶ್ರೀಮತಿ ಉಷಾ ಕಲ್ಯಾಣಿ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.