ರಮನಾಥ ರೈ ಬಗ್ಗೆ ಬ್ಲಾಕ್ ಕಾಂಗ್ರೆಸ್ ನಿಂದ ಸುಳ್ಳು ಆರೋಪ

0

ನಂದಕುಮಾರ್ ರ ಕ್ಯಾರೆಕ್ಟರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರ ಕ್ಷಮೆಗೆ ಆಗ್ರಹ

ಈ ಬಾರಿಯ‌ ಚುನಾವಣೆಯಲ್ಲಿ ತಟಸ್ಥರಾಗುತ್ತೇವೆ : ನಂದಕುಮಾರ್ ಅಭಿಮಾನಿಗಳ ಪತ್ರಿಕಾಗೋಷ್ಠಿ

ಪಕ್ಷದ ಅಭ್ಯರ್ಥಿ ಗೆ ಬಿಫಾರಂ ಸಿಕ್ಕಿದ ನಂತರವೂ ಕಾಂಗ್ರೆಸ್ ಅಭ್ಯರ್ಥಿ ಮತ್ತು ಇಲ್ಲಿಯ ಕಾಂಗ್ರೆಸ್ ನಾಯಕರು ಪತ್ರಿಕಾ ಗೋಷ್ಠಿ ನಡೆಸಿ
ರಮಾನಾಥ ರೈ ಯವರ ಬಗ್ಗೆ ಹೇಳಿರುವ ಹೇಳಿಕೆಗೆ ನಮ್ಮ ವಿರೋಧವಿದೆ. ರಮಾನಾಥ ರೈಯವರು ಸಭೆಗೆ ಬಂದು ಕಾರ್ಯಕರ್ತರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ಗೊಂದಲಕ್ಕೀಡು ಮಾಡಿದ್ದಾರೆ ಎಂಬ ಆರೋಪವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕಾರ್ಯಕರ್ತರ ನೈಜತೆಯ ಬಗ್ಗೆ, ನಂದಕುಮಾರ್ ರವರ ಕ್ಯಾರೆಕ್ಟರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಕ್ಷಮೆ ಯಾಚಿಸಬೇಕೆಂದು ಎಂದು ನಂದ ಕುಮಾರ್ ಅಭಿಮಾನಿ‌ ಬಳಗ‌ ಆಗ್ರಹಿಸಿದೆ.

ಎ.21 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂದಕುಮಾರ್ ಅಭಿಮಾನಿ ಬಳಗದ ಮುಖಂಡ ಬಾಲಕೃಷ್ಣ ಬಳ್ಳೇರಿ ಮಾತನಾಡಿ ನಮ್ಮ ಕಾರ್ಯಕರ್ತರಿಗೆ ವಾಟ್ಸಾಪ್ ಹಾಗೂ ದೂರವಾಣಿ ಕರೆ ಮಾಡಿ ಧಮ್ಮಿ ಹಾಕಲಾಗುತ್ತಿದೆ. ಮತ್ತು ಹಿಯಾಳಿಸುವ ಮೂಲಕ ನಮ್ಮನ್ನು ಕೆರಳಿಸುತ್ತಿರುವ ಭರತ್ ಮುಂಡೋಡಿ ಮತ್ತು
ತಂಡಕ್ಕೆ ಸುಳ್ಯದಲ್ಲಿ ಕೃಷ್ಣಪ್ಪರನ್ನು ಗೆಲ್ಲಿಸುವ ಇರಾದೆಯಿಲ್ಲ. ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಹೇಳಿಕೆ ನೀಡುವ ಮೂಲಕ ಹೇಳಿಕೆ ನೀಡಿರುವ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ
ಬ್ಲಾಕ್ ಅಧ್ಯಕ್ಷರು ಸೇರಿ ಎಲ್ಲಾ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಮತ್ತು ರಮಾನಾಥ ರೈ ಯವರ ಕ್ಷಮೆಯನ್ನು
ಕೇಳಬೇಕು.
ಡಿ.ಕೆ ಶಿವಕುಮಾರ್ ರವರು ರಮಾನಾಥ ರೈಯವರಿಗೆ ಸಮೀಕ್ಷೆ ನಡೆಸಲು ಸೂಚಿಸಿರುವ
ವಿಷಯವನ್ನು ತಿರುಚಿ ಸಭೆ ನಡೆಯದಂತೆ ನೋಡಿಕೊಳ್ಳಲು ಪ್ರಯತ್ನಿಸಿದ ಈ ನಾಯಕರು ಮತ್ತು ಈ ಬಗ್ಗೆ
ಪತ್ರಿಕಾ ಗೋಷ್ಠಿಯಲ್ಲಿ ತಪ್ಪು ಸಂದೇಶವನ್ನು ನೀಡಿ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕಾರ್ಯ ಮಾಡಿರುತ್ತಾರೆ.
ಈ ರೀತಿ ಮಾಡಿರುವ ನಾಯಕರುಗಳು ಹೇಗೆ ತಾನೆ ಕೃಷ್ಣಪ್ಪರನ್ನು ಗೆಲ್ಲಿಸಲು ಪ್ರಯತ್ನಿಸಬಹುದು? ಎಂದು ಅವರು ಪ್ರಶ್ನಿಸಿದ್ದಾರೆ.
ಕೃಷ್ಣಪ್ಪರವರಿಗೆ ಬಿಫಾರಂ ಸಿಕ್ಕಿದ ನಂತರವೂ ನಾಮಪತ್ರ ಸಲ್ಲಿಕೆಯ ಸಂದರ್ಭ ನಂದಕುಮಾರ್
ರವರನ್ನಾಗಲೀ ಅವರ ಅಭಿಮಾನಿ ಕಾರ್ಯಕರ್ತರನ್ನಾಗಲೀ ಸಂಪರ್ಕಿಸದೇ, ಕಡೆಗಣಿಸಿ ನಾಮ ಪತ್ರವನ್ನು
ಸಲ್ಲಿಸಿರುತ್ತಾರೆ. ಈ ನಾಮಪತ್ರ ಸಲ್ಲಿಕೆಯ ಸಂದರ್ಭ ಸುಳ್ಯ ಕ್ಷೇತ್ರದ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರಿಲ್ಲದೆ
ಸ್ವಪ್ರತಿಷ್ಠೆಗೆ ಪಕ್ಷವನ್ನು ಬಲಿಕೊಡುತ್ತಿರುವ ಇವರಿಂದ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಹಂಬಲಿಸುವುದು
ಶೂನ್ಯವೇ ಸರಿ.
ನಂದಕುಮಾರ್ ಅಭಿಮಾನಿ ಬಳಗದ ಕಾರ್ಯಕರ್ತರಾದ ನಾವೆಲ್ಲರೂ ನಮ್ಮ ಬಳಗದ ಕೋರ್
ಕಮಿಟಿಯ ಸದಸ್ಯರು ಈ ಬಗ್ಗೆ ಕಡಬದಲ್ಲಿ ಸಭೆ ಸೇರಿ ಈ ಬೆಳವಣಿಗೆಗಳ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿ
ನಂದಕುಮಾರ್ ರವರು ಪಕ್ಷೇತರರಾಗಿ ನಾಮ ಪತ್ರ ಸಲ್ಲಿಸದಂತೆಯೂ, ಅಭಿಮಾನಿ ನಿಷ್ಟಾವಂತ
ಕಾರ್ಯಕರ್ತರಾದ ನಾವೆಲ್ಲರೂ ಪಕ್ಷದ ಈ ಚುನಾವಣೆಯ ಕಾರ್ಯಚಟುವಟಿಕೆಯಿಂದ ದೂರವುಳಿದು
ತಟಸ್ಥರಾಗಿರುವುದಾಗಿ ತೀರ್ಮಾನ ಕೈಗೊಂಡಿರುತ್ತೇವೆ.
ಒಂದು ವೇಳೆ ಈ ಪರಿಸ್ಥಿಯನ್ನು ತಿಳಿಗೊಳಿಸಲು ಮಾತುಕತೆ ನಡೆಸುವುದಿದ್ದರೆ ಕೆಪಿಸಿಸಿ ನಾಯಕರ ಉಪಸ್ಥಿತಿಯಲ್ಲಿ ಬಹಿರಂಗ ಸಭೆಯನ್ನು ಕರೆದು ಎಲ್ಲಾ ಕಾರ್ಯಕರ್ತರ ಎದುರು ಕಾರ್ಯಕರ್ತರನ್ನು ನೈಜ ಕಾರ್ಯಕರ್ತರಲ್ಲ ಮತ್ತು ನಂದಕುಮಾರ್ ರವರ ಕ್ಯಾರೆಕ್ಟರ್ ಬಗ್ಗೆ ಹಾಗೂ ಮಾಜಿ ಸಚಿವ ರಮಾನಾಥ ರೈ ಅವರ ಬಗ್ಗೆ ಹೇಳಿರುವ ಸುಳ್ಳು ಹೇಳಿಕೆಗೆ ಬಹಿರಂಗ ಕ್ಷಮೆ ಕೇಳಬೇಕು.
ಈ ಬಾರಿ ಕಾಂಗ್ರೆಸ್ ಸುಳ್ಯದಲ್ಲಿ ಸೋತರೆ ಇದರ ನೈತಿಕ ಹೊಣೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಧನಂಜಯ ಅಡ್ಬಂಗಾಯ ಸೇರಿದಂತೆ ಕೃಷ್ಣಪ್ಪರ ಅಭ್ಯರ್ಥಿ ತನಕ್ಕೆ ಪ್ರಯತ್ನಿಸಿ ಕಾರ್ಯಕರ್ತರ ಭಾವನೆಗೆ ಸ್ಪಂದಿಸಿದ ಈ ನಾಯಕರುಗಳು ರಾಜೀನಾಮೆಯನ್ನು ನೀಡಬೇಕಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಮುಖಂಡರಾದ ಸತೀಶ್ ಶೆಟ್ಟಿ ಬಲ್ಯ, ಕೆ ಗೋಕುಲ್ ದಾಸ್, ಪ್ರವೀಣ್ ಕುಮಾರ್ ಕೆಡಂಜಿ ಗುತ್ತು, ಸಚಿನ್ ರಾಜ್ ಶೆಟ್ಟಿ, ರವೀಂದ್ರ ಕುಮಾರ್ ರುದ್ರಪಾದ, ಭವಾನಿ ಶಂಕರ್ ಕಲ್ಮಡ್ಕ ಉಪಸ್ಥಿತರಿದ್ದರು.