ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ಆಚರಣೆ

0

ಈದುಲ್ ಫಿತರ್ ಹಬ್ಬದ ಅಂಗವಾಗಿ ಇಂದು ಪೈಚಾರ್ ಬದ್ರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ನಮಾಜ್ ಹಾಗೂ ಸಾಮೂಹಿಕ ದುವಾಸಂಗಮ ನಡೆಯಿತು.
ಸ್ಥಳೀಯ ಮಸೀದಿ ಖತೀಬರಾದ ಮುನೀರ್ ಸಕಾಫಿ ವಿರಾಜಪೇಟೆ ನಮಾಜ್ ನೇತೃತ್ವ ವಹಿಸಿದ್ದರು.
ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಶರೀಫ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಜಮಾಅತಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.