ಜಾಲ್ಸೂರು: ಮುಯ್ಯದ್ಧೀನ್ ಜುಮ್ಮಾ ಮಸೀದಿ ವಾರ್ಷಿಕ ಮಹಾಸಭೆ

0

ಜಾಲ್ಸೂರು ಮುಯ್ಯದ್ಧೀನ್ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಹಯಾತುಲ್ ಇಸ್ಲಾಂ ಮದ್ರಸಾ ಸಭಾಭವನದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಜಿ.ಎಂ. ಉಸ್ಮಾನ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಾಲಿ ಸಮಿತಿಯನ್ನು ಮುಂದಿನ ಒಂದು ವರ್ಷದ ಅವಧಿಗೆ ಮುಂದೂಡಲಾಯಿತು.
ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಿ.ಎಂ‌. ಉಸ್ಮಾನ್, ಉಪಾಧ್ಯಕ್ಷರಾಗಿ ಅನ್ವರ್ ಪಂಜಿಕಲ್ಲು, ಜಿ.ಪಿ. ಸಂಶುದ್ಧೀನ್, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಕೆ. ಎಂ. ನಜೀಬ್, ಕಾರ್ಯದರ್ಶಿಯಾಗಿ ಎಸ್.ಎ. ರಜಾಕ್, ಎನ್.ಎ. ಮಜೀದ್, ಕೋಶಾಧಿಕಾರಿಯಾಗಿ ಎನ್.ಐ. ಮಹಮ್ಮದ್ ಕುಂಞಿ ಅಡ್ಕಾರು ಆಯ್ಕೆಯಾದರು.
ನಿರ್ದೇಶಕರುಗಳಾಗಿ ಇಬ್ರಾಹಿಂ ಕತ್ತರ್, ಕೆ. ಇಬ್ರಾಹಿಂ, ಜಿ.ಎ. ರಜಾಕ್, ಎನ್.ಐ. ಇಕ್ಭಾಲ್, ಜಿ.ಎಂ. ಹುಸೈನ್, ಎಸ್.ಎ. ರಹಮಾನ್, ಜಿ.ಎಂ. ಹಸನ್, ಅಬ್ಬಾಸ್ ಪೈಝಿ, ನೌಫಲ್ ಸಅದಿ , ಪಿ.ಎ. ಅಬ್ದುಲ್ಲ, ಬಿ‌.ಎ. ಮೂಸ ಆಯ್ಕೆಯಾದರು.
ಲೆಕ್ಕ ಪರಿಶೋಧಕರಾಗಿ ಜಿ‌.ಪಿ. ಅಬ್ದುಲ್ ಕುಂಞಿ, ಸಲಹಾ ಸಮಿತಿಯ ಸದಸ್ಯರಾಗಿ ಕೆ. ಅಬ್ದುಲ್ಲ, ಸಿ‌.ಎಚ್. ಅಬ್ದುಲ್ ಖಾದರ್ ಹಾಜಿ ಆಯ್ಕೆಯಾದರು.