ಪಿ.ಯು.ಸಿ.ಯಲ್ಲಿ ದಿ.ರವಿರಾಜ ವಳಲಂಬೆಯವರ ಪುತ್ರಿಯರ ವಿಶೇಷ ಸಾಧನೆ

0

ಉಡುಪಿಯಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಳ್ಯದ ದಿ.ರವಿರಾಜ್ ವಳಲಂಬೆಯವರ ಅವಳಿ ಮಕ್ಕಳು ಈ ಬಾರಿಯ ಪಿ.ಯು.ಸಿ. ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಇವರು ಉಡುಪಿಯ ವಿದ್ಯೋದಯ ಪಿ.ಯು.ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದು ಸಂಜನಾ ಎಂ.ಆರ್. 568 ಅಂಕ ( ಶೇ.94 ) ಹಾಗೂ ಸಿಂಚನಾ ಎಂ.ಆರ್. 571 ಅಂಕ ( ಶೇ.95 ) ಗಳಿಸಿ ಅತ್ಯನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ರವಿರಾಜ ವಳಲಂಬೆಯವರು 2020 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಪತ್ನಿ ಶ್ರೀಮತಿ ಸಂಧ್ಯಾ ರವಿರಾಜ್ ರವರು ಸಹಕಾರಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಮಕ್ಕಳೊಂದಿಗೆ ಉಡುಪಿಯಲ್ಲಿ ನೆಲೆಸಿದ್ದಾರೆ.