ಕೂಟೇಲು ಮುತ್ತುಮಾರಿಯಮ್ಮ ದೇವಸ್ಥಾನದ ಜಾತ್ರೆ; ಆಕರ್ಷಕ ಪರವ ಕಾವಡಿ ಮೆರವಣಿಗೆ

0


ಕೂಟೇಲು ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ನಡೆಯುತ್ತಿದ್ದು, ನಿನ್ನೆ ಆಕರ್ಷಕ ಪರವ ಕಾವಡಿ ಮೆರವಣಿಗೆ ನಡೆಯಿತು.


ದುಗ್ಗಲಡ್ಕ ಪೇಟೆಯಿಂದ ಆರಂಭವಾಗಿ ಕೂಟೇಲು ದೇವಸ್ಥಾನದವರೆಗೆ ಸಾಗಿತು.ನೂರಾರು ಭಕ್ತರು ಶ್ರದ್ಧೆ, ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೂಟೇಲು ಸಿ.ಆರ್.ಸಿ.ಕಾಲನಿಯ ಹತ್ತಾರು ಯುವಕರು ದೀಕ್ಷಾಬದ್ಧರಾಗಿ ಪರವ ಕಾವಡಿಯಲ್ಲಿ ಭಾಗವಹಿಸಿದ್ದರು.ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಅಪರೂಪದ ದೃಶ್ಯಗಳನ್ನು ವೀಕ್ಷಿಸಿದರು.