ಕೆ.ವಿ.ಜಿ.ಅಮರಜ್ಯೋತಿ ಪದವಿ ಪೂರ್ವಕಾಲೇಜಿನ ಪ್ರಥಮ ಸ್ಥಾನಿಗಳಿಗೆ ಡಾ.ರೇಣುಕಾಪ್ರಸಾದ್ ಕೆ.ವಿ.ರವರಿಂದ ಪ್ರೋತ್ಸಾಹಧನ ಹಾಗೂ ಸನ್ಮಾನ

0


೨೦೨೨-೨೩ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಕೆ.ವಿ.ಜಿ.ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಿಗೆ ಕೆ.ವಿ.ಜಿ. ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಆದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ತಲಾ ರೂ.೨೫೦೦೦ದಂತೆ ಪ್ರೋತ್ಸಾಹಧನ ಘೋಷಿಸಿದರು.
ಅಕಾಡೆಮಿಯ ಆಡಳಿತ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದಲ್ಲಿ ೫೮೧ಅಂಕದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಅಪ್ರತಿಮ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ಕು.ಪ್ರಜ್ಞಾ ಕೆ.ಸಿ ಇವರಿಗೆ ರೂ.೨೫೦೦೦ವನ್ನು ನೀಡಿ ಮ್ಯಾನೆಜಿಂಗ್ ಟ್ರಸ್ಟಿ ಡಾ.ರೆಣುಕಾಪ್ರಸಾದ್ ಕೆ ವಿ ಅವರು ಶಾಲು ಹೊದಿಸಿ ಸನ್ಮಾನಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿ, ಅವರು ಕೆ.ವಿ.ಜಿ.ದಂತ ಮಹಾವಿದ್ಯಾಲಯ ಸುಳ್ಯ ಹಾಗೂ ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜು ಸುಳ್ಯದಲ್ಲಿ ತನ್ನ ವಿದ್ಯಾಬ್ಯಾಸವನ್ನು ಮುಂದುವರಿಸುವಲ್ಲಿ,ಅವರಿಗೆ ಬೊಧನಾ ಶುಲ್ಕದಲ್ಲಿ ಶೇಕಡಾ ೫೦ ರಿಯಾಯಿತಿಯನ್ನು ಘೋಷಿಸಿದರು.
ಈಕೆ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಕುದ್ಕುಳಿ ಅಜ್ಜಿಕಲ್ಲು ಮನೆ ಚೆನ್ನಕೇಶವ ಮತ್ತು ಹೇಮಾವತಿ ದಂಪತಿಗಳ ಪುತ್ರಿ.
ಈ ಸಂದರ್ಭದಲ್ಲಿ ಅಮರಜ್ಯೋತಿ ಪದವಿ ಪೂರ್ವಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಕಾಲೇಜಿನ ಪ್ರಾಂಶುಪಾಲೆ ಡಾ.ಯಶೋದರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್, ಅಕಾಡೆಮಿ ಕಛೇರಿಯ ಅಧೀಕ್ಷಕರಾದ ಪ್ರಸನ್ನಕಲ್ಲಾಜೆ, ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.