ಏ. 25: ಮುಪ್ಪೇರ್ಯ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಶ್ರೀ ಧರ್ಮಶಾಸ್ತಾ ಸೇವಾ ಟ್ರಸ್ಟ್ ಮುಪ್ಪೇರ್ಯ ಇದರ ಆಶ್ರಯದಲ್ಲಿರುವ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕೋತ್ಸವ
ನಾಳೆ ನಡೆಯಲಿದೆ. ಪೂರ್ವಾಹ್ನ 8.00 ಕ್ಕೆ ಪ್ರಾರ್ಥನೆ, 8.30ರಿಂದ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ಪೂ. 11.00ರಿಂದ ಶ್ರೀ ಅಯ್ಯಪ್ಪ ಭಜನಾ ಮಂದಿರ ಬೇಂಗತ್ತಡ್ಕ -ಬಳಪ್ಪ, ಮುಳ್ಳೇರಿಯಾ ಇದರ ಚಂದ್ರಶೇಖರ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.
ಶ್ರೀ ಧರ್ಮಶಾಸ್ತಾ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ ಕ್ಷೇತ್ರದ ಗುರುಸ್ವಾಮಿ ದಾಮೋದರ ಕಲ್ಕಳ, ಗೌರವಾಧ್ಯಕ್ಷರಾಗಿ ಅಶೋಕ್ ಶೆಟ್ಟಿ, ಕಾರ್ಯದರ್ಶಿಯಾಗಿ
ರಾಜೇಶ್ ಸುವರ್ಣ, ಜೊತೆ ಕಾರ್ಯದರ್ಶಿಯಾಗಿ
ಮೋನಪ್ಪ ಪೂಜಾರಿ, ಖಜಾಂಜಿಯಾಗಿ
ಜಗನ್ನಾಥ ರೈ ಎ.ಎಂ. ಉಪಾಧ್ಯಕ್ಷರಾಗಿ
ಬಾಲಕೃಷ್ಣ ದೇವಸ್ಯ ಸೇವೆ ಸಲ್ಲಿಸುತ್ತಿದ್ದಾರೆ.