ನೆಹರು ಮೆಮೋರಿಯಲ್ ಕಾಲೇಜು: ಶೈಕ್ಷಣಿಕ ಅಧ್ಯಯನ ಭೇಟಿ

0


ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಇದರ ಬಿ.ಎ ಪದವಿ ವಿದ್ಯಾರ್ಥಿಗಳು, ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಮುನ್ಸಿಫ್ ಕೋರ್ಟ್ ಸುಳ್ಯ ಇಲ್ಲಿಗೆ ದಿನಾಂಕ: ೨೪.೦೪.೨೦೨೩ರಂದು ಶೈಕ್ಷಣಿಕ ಅಧ್ಯಯನ ಭೇಟಿ ನೀಡಿದರು. ನ್ಯಾಯಾಲಯದ ಕಾರ್ಯ ಚಟುವಟಿಕೆಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಪಡೆದುಕೊಂಡರು. ಈ ಅಧ್ಯಯನ ಭೇಟಿಯು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಮತಾ ಕೆ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಕಾಲೇಜಿನ ಉಪನ್ಯಾಸಕರುಗಳಾದ ವಿಷ್ಣು ಪ್ರಶಾಂತ್ ಬಿ, ಹರೀಶ ಸಿ ಹಾಗೂ ಹರಿಪ್ರಸಾದ್ ಎ.ವಿ ಸಹಕರಿಸಿದರು.