ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತಗೊಳಿಸಿ, ಜಾಕ್ ವೆಲ್ ಬಳಿಯ ನದಿ‌ ಹೂಳೆತ್ತಬೇಕು

0

ಸುಳ್ಯ ನಗರದ ಕುಡಿಯುವ ನೀರಿನ ಸಮಸ್ಯೆ : ನ.ಪಂ. ವತಿಯಿಂದ ತಹಶಿಲ್ದಾರ್ ರಿಗೆ‌ ಮನವಿ

ಸುಳ್ಯ ನಗರದ ಕುಡಿಯುವ ನೀರು ಮೂಲಧಾರವಾಗಿರುವ ಪಯಸ್ವಿನಿ ನದಿಯ ಹರಿವು ಸಂಪೂರ್ಣ ನಿಂತುಹೋಗಿದ್ದು, ನಗರಕ್ಕೆ ಈಗಿರುವ ಹಂತದಲ್ಲಿ ಗರಿಷ್ಠ 3-4 ದಿನಗಳಿಗೆ ಮಾತ್ರ ನೀರು ಪೂರೈಕೆಯು ಸಾಧ್ಯವಿರುವಂತೆ ಕಂಡುಬರುತ್ತಿದೆ.

ಈ ಹಿನ್ನಲೆಯಲ್ಲಿ ಪಯಸ್ವಿನಿ ನದಿಯ ನೀರಿನಹರಿವು ಹೆಚ್ಚು ಮಾಡುವ ನಿಟ್ಟಿನಲ್ಲಿ ಸುಳ್ಯದಿಂದ ಸಂಪಾಜೆವರೆಗಿನ ಪಯಸ್ವಿನಿ ನದಿಗೆ ಅಳವಡಿಸಿರುವ ಕೃಷಿ ಪಂಪ ಸೆಟ್‌ಗಳಿಗೆ ವಿದ್ಯುತ್‌ ಕಡಿತಗೊಳಿಸುವುದು, ಜಾಕ್ ವೆಲ್ ಬಳಿಯಲ್ಲಿ ನದಿ ಹೂಳೆತ್ತುವುದು, ನೀರಿನ ಮಿತ ಬಳಕೆಯ ಕುರಿತಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು. ಇತ್ಯಾದಿ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ.

ಪ್ರಸ್ತುತ ಚುನಾವಣಾ ಸಮಯದಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಸಭೆ ಕರೆದು ತುರ್ತು ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲದೇ ಇರುವ ಹಿನ್ನಲೆಯಲ್ಲಿ ತಾಲೂಕು ದಂಡಾಧಿಕಾರಿಗಳಾದ ತಾವು ಈ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಈ ಮೂಲಕ ಆಗ್ರಹಿಸುತ್ತೇವೆ ಎಂದು ‌ತಹಶೀಲ್ದಾರ್‌ರಿಗೆ ನೀಡಿದ ಮನವಿಯಲ್ಲಿ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಿನಂತಿಸಿಕೊಂಡಿದ್ದಾರೆ.