ಮೇ.1-3 : ಅಲೆಕ್ಕಾಡಿ ತರವಾಡು ಬ್ರಹ್ಮಕಲಶೋತ್ಸವ

0

ಶ್ರೀ ವನದುರ್ಗಾದೇವಿ ಮತ್ತು ಧರ್ಮದೈವ ಧೂಮವತಿ ಹಾಗೂ ಸಹಪರಿವಾರ ದೈವಗಳ ಬ್ರಹ್ಮಕಲಶೋತ್ಸವ

ಮೇ.01 ರಿಂದ 03 ರವರೆಗೆ ಶ್ರೀ ವನದುರ್ಗಾ ದೇವಿ ಮತ್ತು ಶ್ರೀ ಧರ್ಮ ದೈವ ಧೂಮವತಿ ಹಾಗೂ ಸಹ ಪರಿವಾರ ದೈವಗಳ ಸೇವಾ ಸಮಿತಿ ವತಿಯಿಂದ ಬ್ರಹ್ಮಕಲಶೋತ್ಸವ ನಡೆಯಲಿರುವುದು. ಕುಟುಂಬದ ಮೂಲಸ್ಥಾನ ಪುತ್ತೂರ ಕೊಟ್ಯ ಶ್ರೀ ಧೂಮವತಿ ಕ್ಷೇತ್ರದ ಮುಖ್ಯಸ್ಥರು ಹಾಗೂ ದೈವಗಳ ಪ್ರಧಾನ ಕರ್ಮಿಯಾಗಿರುವ ಕೆ.ನಾರಾಯಣ ಪೂಜಾರಿ ಯವರ ಉಪಸ್ಥಿತಿಯಲ್ಲಿ ಕ್ಷೇತ್ರ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀವೀರ ವೆಂಕಟನರಸಿಂಹ ತಂತ್ರಿಯವರ ನೇತೃತ್ವದಲ್ಲಿ ಅಲೆಕ್ಕಾಡಿ ತರವಾಡು ಬ್ರಹ್ಮಕಲಶೋತ್ಸವವು ನಡೆಯಲಿರುವುದು.

ಏಪ್ರಿಲ್ 26 ರಂದು ಗೊನೆ ಮುಹೂರ್ತ ನಡೆಯಲಿರುವುದು. ಮೇ.೦೧ ರಂದು ಸೋಮವಾರ ಬೆಳಿಗ್ಗೆ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನದಿಂದ ಹಸಿರುವಾಣಿ ಮತ್ತು ದೈವ ದೇವರ ಮೂರ್ತಿ-ಮುಖವಾಡ, ಮಣಿ-ಮಂಚದ ಮೆರವಣಿಗೆ, ಉಗ್ರಾಣ ಮುಹೂರ್ತ ಬಳಿಕ ಅನ್ನ ಸಂತರ್ಪಣೆ, ಸಂಜೆ ತಂತ್ರಿವರ್ಯರ ಆಗಮನ ಪೂರ್ಣಕುಂಭಸ್ವಾಗತ, ಸಂಜೆ ೬ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಪಂಚಗವ್ಯ, ಪುಣ್ಯಾಹ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಫ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತು ಬಲಿ, ಪ್ರಕಾರ ಬಲಿ, ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು.

ಮೇ.02ರಂದು ಬೆಳಿಗ್ಗೆ ಬಿಂಬಶುದ್ಧಿ, ಶಾಂತಿಹೋಮ, ಪ್ರಾಯಶ್ಚಿತ್ತಹೋಮ, ದುರ್ಗಾಹವನ, ಬಿಂಬಾದಿವಾಸ, ಮಧ್ಯಾಹ್ನ ಅನ್ನಸಂತರ್ಪಣೆ, ಅದೇ ದಿನ ಸಂಜೆಯಿಂದ ಕಲಶಾಧಿವಾಸಗಳು, ಅಧಿವಾಸಹೋಮಗಳು, ಶಯ್ಯಾಧಿವಾಸಗಳು, ರಾತ್ರಿ ಅನ್ನಸಂತರ್ಪಣೆ ನಡೆಯಲಿರುವುದು.

ಮೇ.03 ರಂದು ಬೆಳಿಗ್ಗೆ ತರವಾಡು ಮನೆಯಲ್ಲಿ ಗಣಪತಿ ಹವನ, ವನದುರ್ಗಾ ದೇವಿ ಸಾನಿಧ್ಯದಲ್ಲಿ ಗಣಪತಿ ಹವನ, ನೂತನ ತರವಾಡು ಮನೆಯ ಗೃಹಪ್ರವೇಶ, ಮೂಲ ನಾಗದೇವರ ಚಿತ್ರಕೂಟ ಪ್ರತಿಷ್ಠೆ, ವನದುರ್ಗಾದೇವಿಯ ಪ್ರತಿಷ್ಠೆ, ಧರ್ಮದೈವ ಧೂಮವತಿ ದೈವದ ಪ್ರತಿಷ್ಠೆ ಹಾಗೂ ಸಹಪರಿವಾರ ದೈವಗಳ ಪ್ರತಿಷ್ಠೆ , ಆಶ್ಲೇಷ ಬಲಿಪೂಜೆ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ನಿತ್ಯನೈಮಿತ್ತಿಕ (ಮುಡಿಪುಪೂಜೆ), ಅನುಷ್ಠಾನ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು ಎಂದು ಅಲೆಕ್ಕಾಡಿ ತರವಾಡು ಆಡಳಿತ ಸಮಿತಿ ಅಧ್ಯಕ್ಷ ದೇವಾನಂದ ಕೋಡಿಂಬಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಡಿ.ಮುಕುಂದ ಗೋಣಿಕಪ್ಪಲ್ ಹಾಗೂ ಅಲೆಕ್ಕಾಡಿ ತರವಾಡು ಕುಟುಂಬಸ್ಥರು ತಿಳಿಸಿದ್ದಾರೆ.