ವಾಗ್ದೇವಿ ಎಂ.ಡಿ. ಸೇರ್ಕಜೆಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್

0

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಸುಳ್ಯದ ಮೊಂಟಡ್ಕ ಸೇರ್ಕಜೆ ತಿಮ್ಸನ್ ದಿವಾಕರ ಹಾಗೂ ಶ್ರೀಮತಿ ಗೀತಾಂಜಲಿ ಎಂ.ಎಸ್. ರವರ ಪುತ್ರಿ ವಾಗ್ದೇವಿ ಎಂ.ಡಿ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 564 ಅಂಕಗಳಿಸಿ ಶೇ. 94 ಪಲಿತಾಂಶದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.


ಇವರು ಮಂಗಳೂರಿನ ವಳಚ್ಚಿಲ್ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹಾಗೂ ಸುಳ್ಯದ ಖ್ಯಾತ ವೈದ್ಯರಾಗಿದ್ದ ಮಿತ್ತಮಜಲು ದಿ. ಡಾ. ಎಂ. ಸುಗುಣ ಗೌಡರ ಮೊಮ್ಮಗಳು.