ವರುಣಾ ಕ್ಷೇತ್ರದಲ್ಲಿ ಮುಂದುವರಿದ ಲಂಚ,ಭ್ರಷ್ಟಾಚಾರ ಸುದ್ದಿ ಜನಾಂದೋಲನ

0

ಲಂಚ, ಭ್ರಷ್ಟಾಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ ಕ್ಷೇತ್ರದ ಜನತೆ!

ಪುತ್ತೂರು: ಲಂಚ, ಭ್ರಷ್ಟಾಚಾರ ದ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸುದ್ದಿ ಜನಾಂದೋಲನ ಏ.26ರಂದು ಮುಂದುವರಿದೆ. ಸುದ್ದಿ ಜನಾಂದೋಲನ ತಂಡ ಕ್ಷೇತ್ರದ ಜನರನ್ನು ಭೇಟಿಯಾದಾಗ ಲಂಚ, ಭ್ರಷ್ಟಾಚಾರ ದ ಕರಾಳ ಮುಖಗಳು ತೆರೆದುಕೊಂಡಿದೆ. ಭ್ರಷ್ಟಾಚಾರ ದ ಬಗ್ಗೆ ಬಿಡಿಸಿ ಹೇಳುವ ಜನತೆ ಸುದ್ದಿ ಜನಾಂದೊಲನಕ್ಕೆ ಬೆಂಬಲ ಸೂಚಿಸಿದ್ದಾರೆ. ಲಂಚ ಭ್ರಷ್ಟಾಚಾರ ದ ಬಗ್ಗೆ ಗಮನ ಸೆಳೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರ ಹಾಗೂ ಮುಖ್ಯಮಂತ್ರಿ ಪ್ರತಿನಿಧಿಸುತ್ತಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಡಾ.ಯು.ಪಿ.ಶಿವಾನಂದ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಲಂಚ, ಭ್ರಷ್ಟಾಚಾರ ಬಗ್ಗೆ ರಾಜ್ಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿ ಲಂಚ, ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಬೇಕು ಎಂಬ ಆಶಯದೊಂದಿಗೆ ಸುದ್ದಿ ಜನಾಂದೋಲನ ಮುಂದುವರಿಯುತ್ತಿದೆ.


ವರುಣಾ ಕ್ಷೇತ್ರದಲ್ಲಿ ಪಂಚಾಯತ್, ಹಿಡಿದು ಅಂಗನವಾಡಿ ಕೇಂದ್ರ, ಕಂದಾಯ ಇಲಾಖೆ, ಸರಕಾರದ ವಿವಿಧ ಇಲಾಖೆಯಲ್ಲಿ ಜನರಿಗಾಗಿರುವ ತೊಂದರೆಯನ್ನು ವಿವರಿಸಿದ್ದಾರೆ.