ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪ್ರವೀಣ್ ಕನಸು ನನಸು ಮಾಡೋಣ : ಕಲ್ಲಡ್ಕ ಪ್ರಭಾಕರ ಭಟ್

0

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವೀಣ್ ನೆಟ್ಟಾರು ಅವರಿಗೆ ಮನೆ ಕಟ್ಟುವ ಕನಸು ಮಾತ್ರ ಇದ್ದುದಲ್ಲ, ರಾಷ್ಟ್ರ ಕಟ್ಟುವ ಕನಸೂ ಇತ್ತು. ಮನೆ ಕನಸು ನನಸಾಗಿದೆ. ರಾಷ್ಟ್ರ ಕಟ್ಟುವ ಅವರ ಕನಸಿಗೆ ಈ ಚುನಾವಣೆ ಉತ್ತರವಾಗಬೇಕು. ಇಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತಾಗಬೇಕು ಎನ್ನುವುದು ಪ್ರವೀಣ್ ಕನಸಾಗಿತ್ತು. ಅದನ್ನು ಮುಂಬರುವ ಚುನಾವಣೆಯಲ್ಲಿ ನನಸು ಮಾಡಬೇಕು ಎಂದರು.