ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ “Research Grants & Patents” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ

0

ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಇದರ ಸಹಯೋಗದಲ್ಲಿ “Research Grants & Patents” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ಎ.27 ರಂದು ಇಚಿಜಿನಿಯರಿಂಗ್ ಕಾಲೇಜಿನ ಅಡಿಟೋರಿಯಂನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾದ ಡಾ. ಜಿ.ಬಿ. ಕೃಷ್ಣಪ್ಪ, ಡೀನ್ ರೀಸರ್ಚ್ & ಡೆವೆಲಪ್‌ಮೆಂಟ್, ಪ್ರೊಫೆಸರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪಾರ್ಟ್‌ಮೆಂಟ್, ವಿ.ವಿ.ಸಿ.ಇ., ಮೈಸೂರು ಇವರು ಸಂಶೋಧನಾ ವಿದ್ವಾಂಸರು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು.

ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಕ್ಷ ನಾಯಕ್ ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ. ನಸ್ರತ್ ಫರೀದ್, ಮುಖ್ಯಸ್ಥರು ಪಿ.ಹೆಚ್.ಡಿ ಹಾಗೂ ರೀಸರ್ಚ್ & ಡೆವಲಪ್‌ಮೆಂಟ್ ವಿಭಾಗ, ಕೆ.ವಿ.ಜಿ.ಡಿ.ಸಿ ಇವರು ಸ್ವಾಗತಿಸಿದರು. ಡಾ. ನವೀನ್, ಕೆ.ವಿ.ಜಿ.ಡಿ.ಸಿ. ಅತಿಥಿಯನ್ನು ಪರಿಚಯಿಸಿದರು. ಡಾ. ಸವಿತಾ ಸಿ.ಕೆ., ಡೀನ್-ರೀಸರ್ಚ್ ಹಾಗೂ ಪ್ರೊಫೆಸರ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ, ಕೆ.ವಿ.ಜಿ.ಸಿ.ಇ ಇವರು ಧನ್ಯವಾದ ಸಮರ್ಪಿಸಿದರು. ಡಾ. ಆಕಾಶ್ ಮೇದಪ್ಪ, ಕೆ.ವಿ.ಜಿ.ಡಿ.ಸಿ ಇವರು ಕಾರ್ಯಕ್ರಮ ನಿರೂಪಿಸಿದರು. ಇದೇ ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಕೃಷ್ಣಪ್ಪ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದ, ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.