ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚುನಾವಣಾ ಕಚೇರಿ ಸುಳ್ಯದಲ್ಲಿ ಉದ್ಘಾಟನೆ

0

ಸಮಸ್ಯೆ ಅರಿತು‌ ಕೆಲಸ ಮಾಡುವೆ, ನನಗೆ ಅವಕಾಶ ನೀಡಿ : ಸುಂದರ‌ ಮೇರ

ವಿಧಾನ ಸಭಾ ಚುನಾವಣೆ ಗೆ ಸುಳ್ಯ‌ವಿಧಾನ ಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ‌ ಪಕ್ಷದ ಅಭ್ಯರ್ಥಿಯಾಗಿರುವ ಸುಂದರ ಮೇರ ಇವರ ಚುನಾವಣಾ ಕಚೇರಿ ಕೇರ್ಪಳದಲ್ಲಿರುವ ದೇವಿ ನಿಲಯದಲ್ಲಿ ಉದ್ಘಾಟನೆ ಗೊಂಡಿತು

ಹಿರಿಯರಾದ ರಾಮಣ್ಣ‌ ಕೊಳಂಬೆ ಉದ್ಘಾಟಿಸಿ ಶುಭ ಹಾರೈಸಿದರು.


ಬಳಿಕ‌ ಮಾತನಾಡಿದ ಅಭ್ಯರ್ಥಿ ಸುಂದರ ಮೇರರವರು ಕ್ಷೇತ್ರದಲ್ಲಿ ಒಂದಷ್ಟು‌ ಕೆಲಸಗಳು ಆಗಿವೆಯಷ್ಟೆ. ಇನ್ನೂ ಆಗಬೇಕಾದುದು ತುಂಬಾ ಇದೆ. ಇಲ್ಲಿಯ ಸಮಸ್ಯೆ ಅರಿತು‌ ಕೆಲಸ ಮಾಡುವೆ. ಈ‌ಬಾರಿ ಸುಳ್ಯದ ಜನತೆ ನನಗೆ ಅವಕಾಶ ನೀಡಬೇಕು ಎಂದು‌ ಅವರು‌ ವಿನಂತಿಸಿಕೊಂಡರು.

ಪ್ರಮುಖರಾದ ಅಶೋಕ್ ಕೊಂಚಾಡಿ, ಸುಂದರ ನಿಡ್ಪಳ್ಳಿ, ಬುದ್ಧ ಸಂಕೇಶ, ವಸಂತ ಕೊಂಚಾಡಿ, ಅಭಿಷೇಕ್ ಎಂ.ಜಿ, ಕರುಣಾಕರ ಪಲ್ಲತಡ್ಕ, ಸೀತಾರಾಮ ಕೊಂಚಾಡಿ, ರಾಮದಾಸ್ ಮೇರಮಜಲು, ಕೃಷ್ಣ ಜಟ್ಟಿಪಳ್ಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಶೋಕ್‌ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು