ಅಂಜಲಿ ಮೊಂಟೆಸ್ಸೋರಿ ಪ್ಲೆ ಸ್ಕೂಲ್‌ನಲ್ಲಿ ಯಶಸ್ವಿಯಾಗಿ ನಡೆದ ಚಿಣ್ಣರ ಕಲರವ ಬೇಸಿಗೆ ಶಿಬಿರ

0


ಸುಳ್ಯದ ಅಂಜಲಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ನಡೆಸುತ್ತಿರುವ ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್‌ನಲ್ಲಿ ವಾರ್ಷಿಕ ಬೇಸಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಸಮಾರೋಪ ಸಮಾರಂಭ ಎ.26ರಂದು ನಡೆಯಿತು.


ವೇದಿಕೆಯಲ್ಲಿ ಅಂಜಲಿ ಮೊಂಟೆಸ್ಸೋರಿ ಪ್ಲೆ ಸ್ಕೂಲ್ ನ ಸಂಚಾಲಕಿ ಗೀತಾಂಜಲಿ ಟಿ.ಜಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ, ಇನ್ನರ್‌ವೀಲ್ ಅಧ್ಯಕ್ಷೆ ನಯನ, ಕಲಾವಿದೆ ರಮ್ಯಶ್ರೀ ನಡುಮನೆ , ಸಂಗೀತ ಶಿಕ್ಷಕಿ ಶ್ಯಾಮಲ ಅಚಾರ್ ಉಪಸ್ಥಿತರಿದ್ದರು. ಪೋಷಕರು, ಪುಟಾಣಿ ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಏ.18ರಿಂದ 25ರ ತನಕ ನಡೆದ ಶಿಬಿರದಲ್ಲಿ ಒಟ್ಟು 48ಪುಟಾಣಿ ಮಕ್ಕಳು ಭಾಗವಹಿಸಿ ಕ್ರಾಫ್ಟ್, ಕುಣಿತ ಭಜನೆ, ಡ್ಯಾನ್ಸ್ ಇತ್ಯಾದಿ ಕಲಿತು ಸಂಭ್ರಮಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಜತಿನ್ ಹಾಗೂ ಈಶಾನ್ ಕಾರ್ಯಕ್ರಮ ನಿರೂಪಿಸಿ, ವಿಕಾಸ್ ಸ್ವಾಗತಿಸಿ, ಮನಸ್ವಿ ಧನ್ಯವಾದ ಗೈದರು.


ಇಲ್ಲಿ 2023-24 ನೇ ಸಾಲಿನ ದಾಖಲಾತಿ ಪ್ರಾರಂಭಗೊAಡಿದ್ದು, ಸಂಸ್ಥೆಯು ಅಂಬೆಟಡ್ಕದ ವರ್ತಕರ ಸಮುದಾಯ ಭವನಕ್ಕೆ ಸ್ಥಳಾಂತರಗೊಳ್ಳಲಿದೆ.