ಪ್ರಧಾನಿ ಮೋದಿಯವರ 100 ನೇ ಮನ್‌ಕಿಬಾತ್‌ಗೆ ಸಾಕ್ಷಿಯಾಗಲಿರುವ ಡಾ. ದಾಮ್ಲೆ

0

ಪ್ರಧಾನಿ ಮೋದಿಯವರ 1೦೦ನೇ ಮನ್‌ಕಿಬಾತ್ ಕಾರ್ಯಕ್ರಮ ಎ. 30 ರಂದು ಬೆಂಗಳೂರಿನ ರಾಜಭವನದಿಂದ ಆಕಾಶವಾಣಿಯಲ್ಲಿ ಪ್ರಸಾರ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಶೋತೃ ಆಗಿ ಭಾಗವಹಿಸಲು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರಿಗೆ ಆಹ್ವಾನ ಬಂದಿದೆ ಎಂದು ತಿಳಿದು ಬಂದಿದೆ.


ಪ್ರಧಾನಿಯವರ 1೦೦ನೇ ಮನ್‌ಕಿಬಾತ್ ಕಾರ್ಯಕ್ರಮವನ್ನು ವಿಶೇಷ ಕಾರ್ಯಕ್ರಮವಾಗಿ ರೂಪಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳ 1೦೦ ಮಂದಿ ಗಣ್ಯರನ್ನು ರಾಜಭವನಕ್ಕೆ ಆಹ್ವಾನಿಸಿ ಅವರ ಎದುರುಗಡೆ ಪ್ರಧಾನಿಯವರು ಮನ್‌ಕಿಬಾತ್ ಆಡಲಿದ್ದಾರೆ.


ಬೆಳಿಗ್ಗೆ 9.3೦ಕ್ಕೆ ಆಹ್ವಾನದ ಗಣ್ಯರು ರಾಜಭವನದಲ್ಲಿರಬೇಕಾಗಿದ್ದು, 1೦.೦೦ ರಿಂದ 1೧೦.45 ರ ವರೆಗೆ ಮನ್‌ಕಿ ಬಾತ್‌ನ ಶೂಟಿಂಗ್ ನಡೆಯುತ್ತದೆ. 11 ಗಂಟೆಯಿಂದ 11.3೦ರವರೆಗೆ ಎಲ್ಲಾ ಆಕಾಶವಾಣಿ ಕೇಂದ್ರಗಳ ಮೂಲಕ ಹಾಗೂ ದೂರದರ್ಶನಗಳಲ್ಲಿ ಇದು ಪ್ರಸಾರವಾಗಲಿದೆ.


ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಡಾ. ದಾಮ್ಲೆಯವರು 75 ಮಂದಿ ಅಪ್ರಕಟಿತ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ತಮ್ಮ ಶಾಲಾ ಮಕ್ಕಳಿಂದಲೇ ಪುಸ್ತಕ ರೂಪಿಸಿದ್ದರಲ್ಲದೆ, ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೂ ತಿಳಿಸಿದ್ದರು. “ಈ ಹಿನ್ನಲೆಯಲ್ಲಿ ಮನ್‌ಕಿ ಬಾತ್ ಕಾರ್ಯಕ್ರಮಕ್ಕೆ ಕರೆಸಿದ್ದಾರೋ ಎಂಬುದು ಗೊತ್ತಿಲ್ಲ. ಕಾರ್ಯಕ್ರಮದಲಲಿ ಭಾಗವಹಿಸಲು ಆಹ್ವಾನ ಬಂದಿದೆ. ಪೂರ್ವಾಹ್ನ 9.3೦ಕ್ಕೆ ಮುನ್ನ ರಾಜಭವನಕ್ಕೆ ಬರಲು ತಿಳಿಸಿದ್ದಾರೆ” ಎಂದು ದಾಮ್ಲೆಯವರು ತಿಳಿಸಿದ್ದಾರೆ.