ಎನ್ನೆಂಸಿ ಸುಳ್ಯ : ಶೈಕ್ಷಣಿಕ ಅಧ್ಯಯನ ಭೇಟಿ

0


ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಇದರ ಬಿ.ಎ ಪದವಿ ವಿದ್ಯಾರ್ಥಿಗಳು, ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಸುಳ್ಯದ ತಾಲೂಕು ಅಂಚೆ ಕಛೇರಿಗೆ ಎ. ೨೪ ರಂದು ಶೈಕ್ಷಣಿಕ ಅಧ್ಯಯನ ಭೇಟಿ ನೀಡಿದರು.

ಅಂಚೆ ಕಛೇರಿಯಲ್ಲಿ ಲಭ್ಯವಿರುವ ವಿವಿಧ ಸೇವೆಗಳು, ಕಾಗದ ಪತ್ರಗಳ ವಿತರಣೆ, ಉಳಿತಾಯ ಖಾತೆ ಯೋಜನೆಗಳು, ಅಂಚೆ ಇಲಾಖೆಯಲ್ಲಿ ನೇಮಕಾತಿಗೆ ಸಂಬಂಧಪಟ್ಟ ವಿಷಯಗಳ ಮಾಹಿತಿಯನ್ನು ಪಡೆದರು. ಶ್ರೀಯುತ ಪ್ರವೀಣ್ ಪೋಸ್ಟಲ್ ಅಸಿಸ್ಟೆಂಟ್, ಶ್ರೀಮತಿ ಯಶೋಧ ಪೋಸ್ಟ್ ಮಾಸ್ಟರ್, ಶ್ರೀಯುತ ವಿಜಯ್ ಡಿ.ಆರ್ ಪೋಸ್ಟಲ್ ಅಸಿಸ್ಟೆಂಟ್ ಇವರು ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯ ಮಾಹಿತಿಯನ್ನು ನೀಡಿ ಸಹಕರಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಮಮತಾ ಕೆ. ಇವರ ನೇತೃತ್ವದಲ್ಲಿ ಶೈಕ್ಷಣಿಕ ಭೇಟಿ ಕಾರ್‍ಯಕ್ರಮ ನಡೆಯಿತು.