ಸಂಪಾಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಮಾಲತಿ ವೈ‌.ಕೆ.ನಿವೃತ್ತಿ- ಬೀಳ್ಕೊಡುಗೆ

0


ಸಂಪಾಜೆ ಪದವಿ ಪೂರ್ವ ಕಾಲೇಜು ಇಲ್ಲಿ ಹತ್ತು ವರ್ಷಗಳಿಂದ ಪ್ರಾಂಶುಪಾಲರಾಗಿದ್ದ ಶ್ರೀಮತಿ ಮಾಲತಿ ವೈ.ಕೆ. ಇಂದು ಸೇವೆಯಿಂದ ನಿವೃತ್ತಿ ಹೊಂದಿದ್ದು, ಬೀಳ್ಕೊಡುಗೆ ಮಾಡಲಾಯಿತು.
ಶ್ರೀಮತಿ ಮಾಲತಿಯವರು ಒಟ್ಟು 34 ವರ್ಷ 6 ತಿಂಗಳು ಸೇವೆಯನ್ನು ಸಲ್ಲಿಸಿದ್ದರು. ನೂತನ ಪಾಂಶುಪಾಲರಾಗಿ ಲೋಕ್ಯಾನಾಯ್ಕ ಬಿ.ಇವರನ್ನು ಸಂಪಾಜೆ ಎಜ್ಯುಕೇಶನ್ ಸೊಸೈಟಿ ಇದರ ಆಡಳಿತ ಮಂಡಳಿಯವರು ನಿಯುಕ್ತಿಗೊಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಎಂ.ಶಂಕರನಾರಾಯಣ ಭಟ್,ಕಾರ್ಯಕಾರಿ ಸಮಿತಿ ಸದಸ್ಯರಾದ ಮುರಳೀಧರ್ ಕೆ.ಜಿ.,ಜಯರಾಮ ಕೆ.ಎಸ್. ಮತ್ತು ಮಹಮ್ಮದ್ ಹನೀಫ್, ಸಹೋದ್ಯೋಗಿಗಳಾದ ಚನ್ನಬಸಪ್ಪ ಎಸ್., ಕುಶಾಲಪ್ಪ ಕೆ.,ಕೃಷ್ಣಪ್ರಕಾಶ್, ಕೆ.ಗೋಪಾಲಕೃಷ್ಣ ಮತ್ತು ಲಕ್ಷ್ಮಿ ಉಪಸ್ಥಿತರಿದ್ದು ನಿವೃತ್ತ ಜೀವನಕ್ಕೆ ಶುಭಹಾರೈಸಿದರು ಮತ್ತು ನೂತನ ಪ್ರಾಂಶುಪಾಲರನ್ನು ಸ್ವಾಗತಿಸಿದರು.