ಕೋನಡ್ಕಪದವು: ಬಿಜೆಪಿ ಮಹಾ ಸಂಪರ್ಕ ಅಭಿಯಾನಕ್ಕೆ ತಂಡ ರಚನೆ

0

ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮವು ಎ.30ರಂದು ಜರುಗಲಿದ್ದು, ಜಾಲ್ಸೂರು ಗ್ರಾಮದ ಕೋನಡ್ಕಪದವು 184ನೇ ವಾರ್ಡಿನಲ್ಲಿ ಕಾರ್ಯಕರ್ತರ ತಂಡವನ್ನು ಎ.29ರಂದು ಸಂಜೆ ರಚಿಸಲಾಯಿತು.
ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಒಟ್ಟು 25 ಜನರ ತಂಡವನ್ನು ರಚಿಸಲಾಗಿದ್ದು, ಎ.30ರಂದು ಒಂದೇ ದಿನ ಐದು ತಂಡಗಳಾಗಿ ಮನೆ ಮನೆ ಭೇಟಿ ಹಾಗೂ ಮತಯಾಚನೆ ನಡೆಯಲಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ದಿನೇಶ್ ಅಡ್ಕಾರು, ಅಶೋಕ ಅಡ್ಕಾರು, ರಜತ್ ಅಡ್ಕಾರು, ಸುಖೇಶ್ ಅಡ್ಕಾರುಪದವು ಸೇರಿದಂತೆ ಕೋನಡ್ಕಪದವು ವಾರ್ಡಿನ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.