ಸೇವಾಜೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೇಮಲತಾ ಸುಳ್ಳಿ ಇಂದು ನಿವೃತ್ತಿ

0

ಸೇವಾಜೆ ಶಾಲೆಯಲ್ಲಿ ಕಳೆದ 24 ವರ್ಷಗಳಿಂದ ಶಿಕ್ಷಕಿಯಾಗಿ ಪ್ರಸ್ತುತ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಶ್ರೀಮತಿ ಪ್ರೇಮಲತಾ ಸುಳ್ಳಿಯವರು ಇಂದು (ಎ.30) ನಿವೃತ್ತಿಯಾಗಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿಮನೆ ಶಂಕರನಾರಾಯಣ ಸುಳ್ಳಿಯವರ ಪತ್ನಿ ಶ್ರೀಮತಿ ಪ್ರೇಮಲತಾರವರು ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ 3 ತಿಂಗಳ ಕಾಲ ಸೇವೆ ಸಲ್ಲಿಸಿ, ಬಳಿಕ 17-11-1999ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇವಾಜೆಗೆ ಶಿಕ್ಷಕಿಯಾಗಿ ಸೇರ್ಪಡೆಗೊಂಡರು. ಬಳಿಕ ಪ್ರಸ್ತುತ ಪ್ರಭಾರ ಮುಖ್ಯೋಪಾಧ್ಯಾಯಿನಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದು, ಎ.30ರಂದು ನಿವೃತ್ತಿ ಗೊಂಡಿದ್ದಾರೆ.

ಪ್ರೇಮಾಲತರವರು ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ನಾಟಿಕಲ್ಲು ಜನಾರ್ಧನ ನಾಯಕ್ ಮತ್ತು ಪ್ರಭಾವತಿ ದಂಪತಿಗಳ ಪುತ್ರಿ.

ಮಂಗಳೂರಿನ ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಕಾಂಕ್ಷಿ ಎಸ್. ರವರು ಪ್ರೇಮಾಲತರವರ ಪುತ್ರಿ.