ಜಯನಗರ ಕುತ್ಪಾಜೆಯಲ್ಲಿ ಮತ್ತೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಸ್ಥಳೀಯರು

0

ಜಯನಗರ ಕುತ್ಪಾಜೆ ಪರಿಸರದ ನಿವಾಸಿಗಳು ತಮ್ಮ ಕಾಲೊನಿಗೆ ಸಮರ್ಪಕವಾಗಿ ಕುಡಿಯುವ ನೀರು ಸಿಗದ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಚುನಾವಣಾ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದರು.


ಕಳೆದ ಕೆಲವು ದಿನಗಳ ಹಿಂದೆ ಇಲ್ಲಿ ಅಳವಡಿಸಲಾಗಿದಂತಹ ಬ್ಯಾನರನ್ನು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜನರ ಮನವೊಲಿಸಿ ಬ್ಯಾನರ್ ತೆರವುಗೊಳಿಸಿದ್ದರು.
ಆದರೆ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ ಕುಡಿಯುವ ನೀರಿನ ವ್ಯವಸ್ಥೆ ಆಗದ ಕಾರಣ ಮತ್ತೆ ಆಕ್ರೋಶ ಗೊಂಡ ಸ್ಥಳೀಯರು ಮೇ 1ರಂದು ಸಂಜೆ ಮತ್ತೆ ಅದೇ ಸ್ಥಳದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.