ಶ್ರವಣ್ ಡಿ.ಕೆ. ಗೆ ಪಿಯುಸಿಯಲ್ಲಿ ಶೇ.93

0

ಪುತ್ತೂರು ಅಂಬಿಕಾ ವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರವಣ್ ಡಿ.ಕೆ. ಗೌಡರವರು 560 (ಶೇ.93.33) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ಇವರು ಸುಳ್ಯ ವಿನುನಗರದ ಶ್ರೀದೇವಿಕಾ ನಿಲಯದ ಕೆ.ಎಸ್.ದೇವಿಪ್ರಸಾದ್ ಮತ್ತು ಡಾ.ಕವಿತಾರವರ ಪುತ್ರ. ಹಾಗೂ ನಿಂತಿಕಲ್ಲಿನ ಕೆ.ಎಸ್.ಗೌಡ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷ ಶೀನಪ್ಪ ಗೌಡ ಮತ್ತು ನಿವೃತ್ತ ವಲಯಾರಣ್ಯಾಧಿಕಾರಿ ಬಿ.ಯಂ. ಮಾಧವ ಗೌಡರ ಮೊಮ್ಮಗ.